ಉಡುಪಿ :head constable who committed suicide : ಸೇವೆಯಿಂದ ಅಮಾನತುಗೊಂಡು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದ ಹೆಡ್ ಕಾನಸ್ಟೇಬಲ್ ಸೇವೆಗ ಹಾಜರಾದ ದಿನವೇ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆಯು ಉಡುಪಿಯಲ್ಲಿ ನಡೆದಿದೆ. ಮೃತ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ಆಗಿದ್ದರು. ಇವರು ಅಮಾನತುಗೊಂಡ ಬಳಿಕ ಮತ್ತೆ ಸೇವೆಗೆ ಸೇರಿದ್ದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎಸ್. ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ.
ಆದಿ ಉಡುಪಿಯ ಪ್ರೌಢಶಾಲೆಯ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗಿದ್ದ ಸ್ಟೋರ್ ರೂಮ್ನ ಹೊರಗೆ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಕರ್ತವ್ಯನಿರತಾಗಿದ್ದ ರಾಜೇಶ್ ಕುಂದರ್ ಇಂದು ಬೆಳಗ್ಗೆ ಸಿಬ್ಬಂದಿ ಬಂದು ನೋಡುವ ವೇಳೆಯಲ್ಲಿ ಸ್ಟೋರ್ ರೂಮ್ನ ಹೊರೆಗೆ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ರಾಜೇಶ್ ಕುಂದರ್ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬಸ್ಥರು ಉಡುಪಿಗೆ ಆಗಮಿಸಿದ್ದಾರೆ, ಕುಟುಂಬಸ್ಥರು ನೀಡುವ ದೂರನ್ನ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್.ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ. ಸೇವೆಯಿಂದ ಅಮಾನತುಗೊಂಡಿದ್ದ ರಾಜೇಶ್ ಕುಂದರ್ ಗುರುವಾರದಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.
ಇದನ್ನು ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್
head constable who committed suicide was returned to duty after suspension