Karkala Hindu Girl Gang Rape : ಕಾರ್ಕಳ : ಹಿಂದೂ ಯುವತಿಯೋವಳಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಕಳದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಕರಣದ ಆರೋಪಿ ಅಲ್ತಾಪ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳದ ಅಯ್ಯಪ್ಪ ನಗರದ ಬಳಿಯಲ್ಲಿ ಇರುವ ಹಾಡಿಯಲ್ಲಿ ೨೧ ವರ್ಷ ಯುವತಿಯೋರ್ವಳನ್ನು ಅಲ್ತಾಪ್ ಎಂಬಾತ ಕರೆದೊಯ್ದಿದ್ದ. ನಂತರ ಆಕೆಗೆ ಬಿಯರ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿದ್ದ. ತನ್ನ ಸ್ನೇಹಿತನನ್ನು ಸ್ಥಳಕ್ಕೆ ಕರೆಯಿಸಿಕೊಂಡು ಇಬ್ಬರೂ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಸದ್ಯ ಕೇಳಿಬಂದಿದೆ.
ಇದನ್ನೂ ಓದಿ : ಕಾರ್ಕಡ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪತ್ನಿ ಕೊಲೆಗೈದು ರಾತ್ರಿಯಿಡಿ ಮನೆಯಲ್ಲೇ ಕುಳಿತಿದ್ದ ಪತಿ !
ಸಂತ್ರಸ್ತ ಯುವತಿಯನ್ನು ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡಿದ್ದ ಆಲ್ತಾಪ್ ಆಕೆಯನ್ನು ಪುಸಲಾಯಿಸಿ ಶುಕ್ರವಾರ ತನ್ನ ಬಳಿಗೆ ಕರೆಯಿಸಿಕೊಂಡಿದ್ದ. ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರದಲ್ಲಿ ಆಕೆಯನ್ನು ಸಂಜೆಯ ವೇಳೆಗೆ ಮನೆಯ ಬಳಿಯಲ್ಲಿಯೇ ಬಿಟ್ಟು ಹೋಗಿದ್ದಾನೆ. ವಿಷಯ ತಿಳಿದ ಪೋಷಕರು ಕಾರ್ಕಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಆಲ್ತಾಪ್ ಎಂಬಾತ ಹಿಂದೂ ಯುವತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ಸಂಜೆಯ ವೇಳೆಗೆ ವಾಪಾಸ್ ಕರೆದು ತಂದಿದ್ದ ವಿಷಯ ತಿಳಿಯುತ್ತಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಗರಂ ಆಗಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಯುವತಿ ದಾಖಲಾಗಿರುವ ಆಸ್ಪತ್ರೆಯ ಮುಂಭಾಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.
ಇದನ್ನೂ ಓದಿ : ಮುಂಗಾರು, ನವಭಾರತ ಪತ್ರಿಕೆಯ ಹಿರಿಯ ಪತ್ರಕರ್ತ ಸಿದ್ದಕಟ್ಟೆ ಹಿ೦ಗಾಣಿ ಚಂದ್ರಶೇಖರ್ ಎರ್ಮಾಳ್ ವಿಧಿವಶ
ಯುವತಿಯ ಮೇಲೆ ತನ್ನ ಸ್ನೇಹಿತನ ಜೊತೆಗೆ ಸೇರಿ ಅತ್ಯಾಚಾರ ಎಸಗಿರುವ ಆರೋಪಿ ಆಲ್ತಾಪ್‌ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಕಾರ್ಕಳ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
Hindu Girl Gang Rape Karkala Muslim man arrested