ಸೋಮವಾರ, ಏಪ್ರಿಲ್ 28, 2025
HomeCrimeJapanese encephalitis: ಮೆದುಳು ಜ್ವರದ ಲಸಿಕೆ ಪಡೆದ ಬಾಲಕ ಸಾವು

Japanese encephalitis: ಮೆದುಳು ಜ್ವರದ ಲಸಿಕೆ ಪಡೆದ ಬಾಲಕ ಸಾವು

- Advertisement -

ಕಲಬುರಗಿ: (Japanese encephalitis) ಮೆದುಳು ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆ ಕಳೆದ ವಾರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿತ್ತು. ಲಸಿಕೆ ಪಡೆದ ಹಲವು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅದೇ ಜೆಇ ಲಸಿಕೆ ಪಡೆದ ಬಾಲಕನೋರ್ವ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ. ಕಲಬುರಗಿ ಹೊರವಲಯದ ಹೀರಾಪುರದ ಬಸವೇಶ್ವರ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಆಕಾಶ್‌ ಎನ್ನುವವನು ಮೃತ ಬಾಲಕ.

ಕಳೆದ ಸೋಮವಾರ ಆಕಾಶ್‌ ಜೆಇ (Japanese encephalitis) ಲಸಿಕೆ ಪಡೆದುಕೊಂಡಿದ್ದ. ಲಸಿಕೆ ಪಡೆದ ದಿನವೇ ಅತನಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ತೀವ್ರವಾದ ಹಿನ್ನಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕಾಶ್‌ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಡಿ. 9 ರಂದು ಸಾವನ್ನಪ್ಪಿದ್ದಾನೆ.

ಮೃತ ಬಾಲಕನಿಗೆ ತಂದೆಯಿಲ್ಲ, ಆಕಾಶ್‌ ಸಾವಿಗೆ ಲಸಿಕೆಯ ಅಡ್ಡ ಪರಿಣಾಮವೇ ಕಾರಣವೆಂದು ಪೋಷಕರು ಹಾಗೂ ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ರಿಪಬ್ಲಿಕ್‌ ಯೂತ್‌ ಫೆಡರೇಷನ್‌ ಸಂಘಟನೆಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಲಸಿಕೆ ನೀಡಿದ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಹೋರಾಟಗಾರರು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ

ಇದನ್ನೂ ಓದಿ : Ragging case: ರ್ಯಾಗಿಂಗ್ ಕೇಸ್ ಭೇದಿಸಲು ಸ್ಟೂಡೆಂಟ್ ಆಗಿ ಕಾಲೇಜಿಗೆ ಎಂಟ್ರಿ ಕೊಟ್ಟ ಲೇಡಿ ಕಾನ್ ಸ್ಟೇಬಲ್; ಮುಂದೇನಾಯ್ತು..?

ಇದನ್ನೂ ಓದಿ : Boy suicide case: ಮಹಿಳೆಯರ ಒಳಉಡುಪು ಧರಿಸಿದ್ದ ಬಾಲಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(Japanese encephalitis) Last week, the health department launched a vaccination campaign to prevent brain fever. Many of the vaccinated children became ill and were hospitalized. Now there are allegations that a boy who received the same JE vaccine has died. The dead boy is Akash, a fourth standard student of Basaveshwar School in Hirapur, Kalaburgi Outskirts.

RELATED ARTICLES

Most Popular