ಸೋಮವಾರ, ಏಪ್ರಿಲ್ 28, 2025
HomeCrimeWall Collapse : ಕುಸಿದ ಗೋಡೆ : ಮಲಗಿದ್ದ ದಂಪತಿಯ ಜೀವಂತ ಸಮಾಧಿ

Wall Collapse : ಕುಸಿದ ಗೋಡೆ : ಮಲಗಿದ್ದ ದಂಪತಿಯ ಜೀವಂತ ಸಮಾಧಿ

- Advertisement -

ಚಿತ್ರದುರ್ಗ : ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದು (Wall Collapse) ಮಲಗಿದ್ದ ದಂಪತಿ ಜೀವಂತ ( Couple dies ) ಸಮಾಧಿ ಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.

ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯ ನಿವಾಸಿ ಚೆನ್ನಕೇಶವ, ಸೌಮ್ಯ ಮೃತ ದಂಪತಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ಚೆನ್ನಕೇಶವ ಅವರ ತಂದೆ ಕ್ಯಾತಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಕ್ಯಾತಣ್ಣ ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಗಾಯಗೊಂಡಿರುವ ಕ್ಯಾತಣ್ಣ ಅವರ ಇಬ್ಬರು ಮಕ್ಕಳ ಪೈಕಿ ಚಿಕ್ಕ ಮಗ ಚೆನ್ನಕೇಶವ ಮನೆಯ ಪಕ್ಕದಲ್ಲಿಯೇ ಗುಡಿಸಲು ಕಟ್ಟಿಕೊಂಡು ಪತ್ನಿ ಸೌಮ್ಯ ಜೊತೆಯಲ್ಲಿ ಜೀವನ ಸಾಗಿಸುತ್ತಿದ್ದ. ಆದರೆ ಭಾನುವಾರ ಬೆಳಗಿನ ಜಾವದಲ್ಲಿ ಮನೆಯ ಗೋಡೆ ಒಮ್ಮಿಂದೊಮ್ಮೆಲೆ ಕುಸಿದು ದುರಂತ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಐಮಂಗಲ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮಿಸ್‌ ಕೇರಳ ಸಾವಿನ ರಹಸ್ಯ ಬಯಲು : ಆಡಿ ಕಾರು ಅಪಘಾತಕ್ಕೆ ಕಾರಣವಾಗಿದ್ದೇನು ?

ಇದನ್ನೂ ಓದಿ :  ನಾವಿಬ್ಬರೂ ಒಂದು ಕೇಸ್ ನಲ್ಲಿದ್ದೇವೆ: ನನಗೆ ಶ್ರೀಕಿ ಪರಿಚಯವಿದೆ – ಮೊಹಮ್ಮದ್‌ ನಲಪಾಡ್

(Couple dies After a wall Collapse due to heavy rain in hiriyuru Chitradurga)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular