ಭಾನುವಾರ, ಏಪ್ರಿಲ್ 27, 2025
HomeBreakingಪ್ರೀತಿಗೆ ತಂದೆಯೇ ವಿಲನ್‌ ! ಮಗಳನ್ನು ಕೊಲೆಗೈದು ಶವ ಎಸೆದ ಅಪ್ಪ

ಪ್ರೀತಿಗೆ ತಂದೆಯೇ ವಿಲನ್‌ ! ಮಗಳನ್ನು ಕೊಲೆಗೈದು ಶವ ಎಸೆದ ಅಪ್ಪ

- Advertisement -

ಬೀರೂರು : ಆಕೆ ತನ್ನೂರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಮಗಳನ್ನು ಪುಸಲಾಯಿಸಿ ಬೇರೊಂದು ಊರಿಗೆ ಕರೆತಂದು, ನಿರ್ಜನ ಪ್ರದೇಶದಲ್ಲಿ ಕುತ್ತಿಗೆಗೆ ಬಿಗಿದು ಮಗಳನ್ನು ಕೊಲೆಗೈದು ನಂತರ ಶವವನ್ನು ರೈಲ್ವೇ ಗೇಟ್‌ ಬಳಿಯಲ್ಲಿರುವ ಗುಂಡಿಯಲ್ಲಿ ಎಸೆದು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಂಚನಕೊಪ್ಪ ಗ್ರಾಮದ ನಿವಾಸಿ ರಾಧಾ ( 18 ವರ್ಷ) ಎಂಬಾಕೆಯೇ ಮೃತ ಯುವತಿ. ರಾಧಾ ತಮ್ಮದೇ ಊರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಮಗಳ ಪ್ರೀತಿ ಮನೆಯವರಿಗೆ ಇಷ್ಟವಿರಲಿಲ್ಲ. ಪದೇ ಪದೇ ಯುವಕನಿಂದ ದೂರವಾಗುವಂತೆ ತಿಳಿಸಿದ್ದರು. ಆದರೆ ರಾಧಾ ಯುವಕನಿಂದ ದೂರವಾಗದೇ ಇರುವುದು ರಾಧಾ ತಂದೆ ಚಂದ್ರಪ್ಪನಿಗೆ ಕೋಪ ತರಿಸಿತ್ತು.

ಮಗಳು ಸ್ವಲ್ಪ ದಿನಗಳ ಕಾಲ ಯುವಕನಿಂದ ದೂರವಾದ್ರೆ ಇಬ್ಬರನ್ನೂ ಬೇರೆ ಮಾಡಬಹುದು ಎಂದು ಯೋಚಿಸಿದ ಚಂದ್ರಪ್ಪ, ಚನ್ನಗಿರಿಯಲ್ಲಿರುವ ತನ್ನ ಅಕ್ಕನ ಮನೆಗೆ ರಾಧಾಳನ್ನು ಬಿಟ್ಟು ಬಂದಿದ್ದ. ಆದರೆ ಊರಿನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಮಗಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬೀರೂರು ಮಾರ್ಗದಲ್ಲಿ ಬರುತ್ತಿದ್ದಈ ವೇಳೆಯಲ್ಲಿ ಮಗಳಿಗೆ ಚಂದ್ರಪ್ಪ ಬುದ್ದಿ ಮಾತು ಹೇಳಿದ್ದಾನೆ. ಆದರೆ ತಂದೆಯ ಮಾತಿಗೆ ರಾಧಾ ಬೆಲೆ ನೀಡದೇ ಇದ್ದಾಗ, ಕೋಪಗೊಂಡ ಚಂದ್ರಪ್ಪ ಬೀರೂರು ಹೊರವಲಯದ ರೈಲ್ವೇ ಗೇಟ್‌ಬಳಿಯಲ್ಲಿನ ನಿರ್ಜನ ಪ್ರದೇಶದಲ್ಲಿ ರಾಧಾಳನ್ನು ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ.

ನಂತರ ಮಗಳು ಸಾವನ್ನಪ್ಪಿರುವುದನ್ನು ಖಾತ್ರಿ ಪಡಿಸಿಕೊಂಡ ಚಂದ್ರಪ್ಪ, ರಾಧಾಳ ಶವವನ್ನು ಎಸೆದು ತನ್ನ ಊರಾಗಿರುವ ಕೆಂಚಿಗನಹಳ್ಳಿಗೆ ತೆರಳಿದ್ದಾನೆ. ಅಪರಿಚಿತ ಯುವತಿಯ ಶವ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾನೆ.

( The father of a villain who murdered his daughter and threw her into a corpse )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular