ಭಾನುವಾರ, ಏಪ್ರಿಲ್ 27, 2025
HomeCrimeಬಾನಲ್ಲೇ ಮಧುಚಂದ್ರಕೆ, ಯುಗಪುರುಷ ಸಿನಿಮಾ ಶೈಲಿಯಲ್ಲಿ ಪತ್ನಿಯ ಕೊಲೆ ಯತ್ನ ! ಕೊನೆಗೆ ಚಾಕುವಿನಿಂದ ಇರಿದು...

ಬಾನಲ್ಲೇ ಮಧುಚಂದ್ರಕೆ, ಯುಗಪುರುಷ ಸಿನಿಮಾ ಶೈಲಿಯಲ್ಲಿ ಪತ್ನಿಯ ಕೊಲೆ ಯತ್ನ ! ಕೊನೆಗೆ ಚಾಕುವಿನಿಂದ ಇರಿದು ಕೊಲೆ

- Advertisement -

ಬೆಂಗಳೂರು : ಕನ್ನಡದ ಖ್ಯಾತ ಸಿನಿಮಾ ಬಾನಲ್ಲೇ ಮಧುಚಂದ್ರಕೆ, ಯುಗಪುರುಷ ಸಿನಿಮಾಗಳಿಂದ ಪ್ರಭಾವಿತನಾಗಿದ್ದ ವ್ಯಕ್ತಿಯೋರ್ವ ಸಿನಿಮಾ ಶೈಲಿಯಲ್ಲಿಯೇ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಎರಡೂ ಸಿನಿಮಾ ಶೈಲಿಯೂ ವಿಫಲವಾಗುತ್ತಿದ್ದಂತೆಯೇ ಕೊನೆಗೆ ಚಾಕುವಿನಿಂದ ಪತ್ನಿಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಅನ್ನಪೂರ್ಣೇಶ್ವರಿ ನಗರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಕಾಂತರಾಜ್‌ ಪತ್ನಿ ರೂಪಾ (34 ವರ್ಷ ) ಕತ್ತನ್ನ ಚಾಕುವಿನಿಂದ ಇರಿದು ಕೊಲೆ ನಡೆದಿತ್ತು. ಕೊಲೆಯಾದ ನಂತರದಲ್ಲಿ ಪತಿ ಕಾಂತರಾಜು ಮನೆಯಿಂದ ನಾಪತ್ತೆಯಾಗಿದ್ದ. ಹೀಗಾಗಿ ಪತಿಯೇ ಕೊಲೆ ಮಾಡಿರೋ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಾಂತರಾಜು ತನ್ನ ಪತ್ನಿ ರೂಪಾ ಅನೈತಿಕ ಸಂಬಂಧವಿರುವ ಕುರಿತು ಅನುಮಾನ ಹೊಂದಿದ್ದ. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದ. ಪತ್ನಿಯನ್ನು ಕೊಲೆ ಮಾಡಿದ ನಂತರದಲ್ಲಿ ಕಾಂತರಾಜು ರೂಪಾ ಜೊತೆಗೆ ಸಂಪರ್ಕದಲ್ಲಿದ್ದ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಬೆದರಿಕೆಯನ್ನು ಒಡ್ಡಿದ್ದಾನೆ. ಅವರಿಬ್ಬರೂ ಕೂಡ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೂಡಲೇ ಅಲರ್ಟ್‌ ಆದ ಪೊಲೀಸರು ಕಾಂತರಾಜುವನ್ನು ಅರೆಸ್ಟ್‌ ಮಾಡಿದ್ದಾರೆ. ಈ ವೇಳೆಯಲ್ಲಿ ತಾನೇ ಕೊಲೆ ಮಾಡಿರುವುದನ್ನೂ ಒಪ್ಪಿಕೊಂಡಿದ್ದಾನೆ.

ಇನ್ನು ಕಾಂತರಾಜು ಪತ್ನಿ ರೂಪಾಳನ್ನು ಕೊಲೆ ಮಾಡಲು ಸಾಕಷ್ಟು ಸಮಯದಿಂದಲೂ ಕಾಯುತ್ತಿದ್ದ. ಇದೇ ಕಾರಣಕ್ಕೆ ಬಾನಲ್ಲೆ ಮಧುಚಂದ್ರಕೆ ಹಾಗೂ ಯುಗಪುರುಷ ಸಿನಿಮಾಗಳನ್ನು ನೋಡಿದ್ದ. ಬಾನಲ್ಲೇ ..ಬಾನಲ್ಲೇ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲಿ ಕೊಲೆ ಮಾಡುವ ಸಲುವಾಗಿ ಜೋಗ ಫಾಲ್ಸ್‌ಗೆ ಪತ್ನಿಯನ್ನು ಕರೆತಂದಿದ್ದ. ಆದರೆ ಈ ಇಲ್ಲಿ ಕೊಲೆ ಮಾಡಿದ್ರೆ ತಾನೇ ಕೊಲೆ ಮಾಡಿರೋದು ಗೊತ್ತಾಗುತ್ತೆ ಅಂತಾ ಬಾವಿಸಿ ಸುಮ್ಮನಾಗಿದ್ದ. ನಂತರ ಯುಗಪುರಷ ಸಿನಿಮಾದ ಶೈಲಿಯಲ್ಲಿ ಕಾರಿನಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಅದೂ ಕೂಡ ಫಲಕೊಟ್ಟಿರಲಿಲ್ಲ. ಕೊನೆಗೆ ಮನೆಯಲ್ಲಿಯೇ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ರೂಪಾ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪತ್ನಿಯ ಮೇಲಿನ ಅನುಮಾನಕ್ಕೆ ಜೀವವೊಂದು ಬಲಿಯಾಗಿರೋದು ಮಾತ್ರ ದುರಂತವೇ ಸರಿ.

ಧರ್ಮಸ್ಥಳಕ್ಕೆ ತೆರಳಿ ಪ್ರಮಾಣ ಮಾಡಿದ್ದ ದಂಪತಿ

ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಕಾಂತರಾಜು ಪತ್ನಿಯನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ ಪ್ರಮಾಣ ಮಾಡಿಸಿದ್ದ. ತಾನು ಯಾವುದೇ ಅನೈತಿಕ ಸಂಬಂಧ ಹೊಂದಿಲ್ಲ ಎಂದು ರೂಪಾ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದಳು. ಆದರೆ ಧರ್ಮಸ್ಥಳದಿಂದ ಮರಳಿ ಬಂದ ನಂತರದಲ್ಲಿ ಅನೈತಿಕ ಸಂಬಂಧ ಮುಂದುವರಿಸಿದ್ದಾಳೆ ಅಂತಾ ಕಾಂತರಾಜು ಆರೋಪಿಸಿದ್ದ. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆ ಗೈದು ಸೀದಾ ಧರ್ಮಸ್ಥಳಕ್ಕೆ ತೆರಳಿ ದೇವರ ಮುಂದೆ ಕ್ಷಮೆಯನ್ನು ಕೇಳಿದ್ದಾನೆ. ಧರ್ಮಸ್ಥಳದಲ್ಲಿ ತಲೆಯನ್ನು ಬೋಳಿಸಿಕೊಂಡಿದ್ದ. ನಂತರ ಸೀದಾ ಪೊಲೀಸರ ಎದುರಲ್ಲಿ ಬಂದು ಶರಣಾಗತನಾಗಿದ್ದಾನೆ.

ಪತ್ನಿ ರೂಪಾಳ ಕೊಲೆಗೈದು ಹಾಸನದಲ್ಲಿ ಚಾಕು ಎಸೆದಿದ್ದ ಕಾಂತರಾಜು

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಮನೆಯಲ್ಲಿ ಪತ್ನಿಯ ಜೊತೆಗೆ ಕಾಂತರಾಜು ಜಗಳ ತೆಗೆದಿದ್ದಾನೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಕಾಂತರಾಜು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆಗೈದಿದ್ದಾನೆ. ನಂತರದಲ್ಲಿ ಚಾಕುವನ್ನು ತೆಗೆದುಕೊಂಡು ಸೀದಾ ಧರ್ಮಸ್ಥಳಕ್ಕೆ ತೆರಳಿದ್ದಾನೆ. ಹಾಸನ ಸಮೀಪದಲ್ಲಿ ಕೊಲೆಗೈದಿದ್ದ ಚಾಕುವನ್ನು ಎಸೆದು ಬಂದಿದ್ದ. ಇದೀಗ ಪೊಲೀಸರು ಕಾಂತರಾಜುವನ್ನು ಹಾಸನಕ್ಕೆ ಕರೆದೊಯ್ದು ಮಹಜರು ಕಾರ್ಯವನ್ನು ನಡೆಸಿದ್ದಾರೆ.

ಇದನ್ನೂ ಓದಿ : ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

ಇದ್ನನೂ ಓದಿ : ನೀರು ಎಂದು ಆಸಿಡ್‌ ಕುಡಿದ ಯುವತಿ ! ಕ್ಯಾಶ್ಯೂ ಫಾಕ್ಟರಿ ಮಾಲೀಕನ ವಿರುದ್ದ ದಾಖಲಾಯ್ತು ದೂರು

( Wife Roopa murder attempt in cinematic style Stabbed to death with a knife in bangalore )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular