ಮಂಗಳೂರು : (Kaukradi PDO Mahesh G.N.) ತಾಲ್ಲೂಕಿನ ನಿವಾಸಿಯೊಬ್ಬರು ತಮ್ಮ ಖಾತೆ ಬದಲಾವಣೆಗಾಗಿ ಪಂಚಾಯಿತಿ ಅಭಿವೃದ್ಧಿ ಕಚೇರಿಗೆ ತೆರಳಿದ್ದು, ಅಧಿಕಾರಿ ನಿವಾಸಿ ಬಳಿ 20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದಾರೆ.
ಸದ್ಯ ಈ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದ ನಿವಾಸಿಯೊಬ್ಬರ ಖಾತೆ ಬದಲಾವಾಣೆಗಾಗಿ ಲಂಚ ಪಡೆದ ಆರೋಪದ ಮೇಲೆ ಕೌಕ್ರಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಜಿ.ಎನ್. ಅವರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜಮೀನಿನ ಖಾತೆ ಬದಲಾಯಿಸಲು 2017ರಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದೇ ಇದ್ದುದರಿಂದ 2021ನೇ ಇಸವಿಯಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಶುಲ್ಕವನ್ನು ಸಂದಾಯ ಮಾಡಿದರೂ ಸಹ ಅವರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ. ಹಾಗಾಗಿ ಅವರು 2023ರ ಜೂನ್ 20 ರಂದು ಕೌಕ್ರಾಡಿ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದರು.
ಇದನ್ನೂ ಓದಿ : Heavy rain alert in Karnataka : ಉಡುಪಿ, ದ.ಕ, ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಭಾರೀ ಮಳೆ
ಇದನ್ನೂ ಓದಿ : June 20 power cut : ಉಡುಪಿ : ಜೂ.20ಕ್ಕೆ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ
ಆಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್.ಜಿ.ಎನ್ ಅವರು ಈ ಕೆಲಸ ಮಾಡಿಕೊಡಲು 20,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರ ವ್ಯಕ್ತಿ ನಮಗೆ ದೂರು ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
Kaukradi PDO Mahesh G.N. caught in the trap of Lokayukta police