ತಿರುವನಂತಪುರಂ : ಪ್ರವಾಸಿಗರ ತಾಣದಲ್ಲಿ ಹೆಸರುವಾಸಿಯಾಗಿರುವ ಕೇರಳದಲ್ಲಿ ದುರಂತ ಘಟನೆಯೊಂದು (Kerala tourist boat) ನಡೆದಿದೆ. ಪ್ರವಾಸಿಗರ ದೋಣಿಯೊಂದು ಮುಳುಗಿ ಮಕ್ಕಳು ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಸದ್ಯ ಈ ದುರ್ಘಟನೆ ಕೇರಳದ ಮಲಪ್ಪುರಂನ ತನೂರ್ ಪ್ರದೇಶದಲ್ಲಿ ನಡೆದಿದೆ. ಪ್ರವಾಸಿಗರ ದೋಣಿಯಲ್ಲಿ 40 ಪ್ರಯಾಣಿಕರು ಇದ್ದರು. ಘಟನೆಯ ವೇಳೆ ದೋಣಿಯಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆಯಲ್ಲಿ ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಚಾರಣೆ ನಡೆಯುತ್ತಿದೆ.
ಸಚಿವ ವಿ. ಅಬ್ದುರಹಿಮಾನ್ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ ಈಗ 22ಕ್ಕೆ ಏರಿದೆ. 7 ಜನರ ಸ್ಥೀತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ ಘೋಷಿಸಿದ್ದಾರೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ರಾಜ್ಯಪಾಲರ ಸಮ್ಮತಿ
ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಇನ್ನಿಲ್ಲ
ಇದನ್ನೂ ಓದಿ : IT Raid Bangalore : ಫೈನಾನ್ಶಿಯರ್‌ಗಳ ಮನೆ ಮೇಲೆ ಐಟಿ ದಾಳಿ : 20 ಕೋಟಿ ರೂಪಾಯಿ ಜಪ್ತಿ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಾವಿಗೆ ಸಂತಾಪ ಸೂಚಿಸಿ ಹೇಳಿಕೆ ನೀಡಿದ್ದು, ಸಂಘಟಿತ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸಿಎಂ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ತಾನೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ : ಬೆಡ್‌ರೂಮ್, ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ : ಖಾಸಗಿ ಹಾಸ್ಟೆಲ್ ಮಾಲೀಕ ಅರೆಸ್ಟ್
Kerala tourist boat: 22 people, including children, died when a tourist boat capsized in Kerala