ಮಂಗಳವಾರ, ಏಪ್ರಿಲ್ 29, 2025
HomeCrimemurder wife : ಮೊಬೈಲ್​ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್​ ಹಾಕಿದ್ದ ಪತಿ ಅಂದರ್​​

murder wife : ಮೊಬೈಲ್​ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್​ ಹಾಕಿದ್ದ ಪತಿ ಅಂದರ್​​

- Advertisement -

murder wife : ತನ್ನ ಅನುಮತಿಯಿಲ್ಲದೆಯೇ ಸ್ಮಾರ್ಟ್​ ಫೋನ್​ ಖರೀದಿ ಮಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡಿದ್ದ ಪತಿಯು ತನ್ನ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ಕೊಲೆಗಾರರನ್ನು ನೇಮಿಸಿದ ಶಾಕಿಂಗ್​ ಘಟನೆಯೊಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು 40 ವರ್ಷದ ಪತಿಯನ್ನು ಬಂಧಿಸಿದ್ದಾರೆ.


ಸುಪಾರಿ ಕೊಲೆಗಾರ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಹರಿತವಾದ ಆಯುಧದಿಂದ ಮಹಿಳೆಯ ಗಂಟಲಿಗೆ ಗಂಭೀರ ಗಾಯವನ್ನು ಮಾಡಿದ್ದು ಪರಿಣಾಮ ಮಹಿಳೆಯ ಗಂಟಲಿನ ಬಳಿ ಪೊಲೀಸರು 7 ಹೊಲಿಗೆಗಳನ್ನು ಹಾಕಿದ್ದಾರೆ.


ದಕ್ಷಿಣ ಕೊಲ್ಕತ್ತಾದ ನರೇಂದ್ರಪುರ ಎಂಬಲ್ಲಿ ಗುರುವಾರ ರಾತ್ರಿ ವೇಳೆಗೆ ಈ ಘಟನೆ ಸಂಭವಿಸಿದೆ. ಪತಿಯ ಜೊತೆಯಲ್ಲಿ ಪೊಲೀಸರು ಸುಪಾರಿ ಹಂತಕನನ್ನೂ ಬಂಧಿಸಿದ್ದಾರೆ. ಈ ಹಂತಕ ನೇಮಿಸಿದ್ದ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


ಇನ್ನು ಈ ಪ್ರಕರಣದ ವಿಚಾರವಾಗಿ ಮಾತನಾಡಿದ ನರೇಂದ್ರಪುರ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ, ಮಹಿಳೆಯು ನೀಡಿರುವ ಮಾಹಿತಿಯ ಪ್ರಕಾರ ಕೆಲವು ತಿಂಗಳ ಹಿಂದೆ ಈಕೆಯು ತನ್ನ ಪತಿ ಬಳಿಯಲ್ಲಿ ತನಗೊಂದು ಮೊಬೈಲ್ ಕೊಡಿಸುವಂತೆ ಕೇಳಿದ್ದಾಳೆ. ಇದಕ್ಕೆ ಪತಿಯು ನಿರಾಕರಿಸಿದ್ದ. ಟ್ಯೂಷನ್​ ಕ್ಲಾಸ್​ ನಡೆಸುತ್ತಿದ್ದ ಮಹಿಳೆಯು ತಾನೇ ಹಣವನ್ನು ಒಟ್ಟುಗೂಡಿಸಿ ಜನವರಿ 1ನೇ ತಾರೀಖಿನಂದು ಹೊಸ ಸ್ಮಾರ್ಟ್​ ಫೋನ್​ ಖರೀದಿ ಮಾಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೆಂಡಾಮಂಡಲರಾದ ಪತಿಯು ನಿನ್ನನ್ನು ಕೊಲೆ ಮಾಡುತ್ತೇನೆಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದರು.


ಗುರುವಾರ ರಾತ್ರಿ ವ್ಯಕ್ತಿಯು ಮನೆಯ ಮುಖ್ಯದ್ವಾರವನ್ನು ಬಂದ್​ ಮಾಡಲು ಹೋಗಿದ್ದಾನೆ. ಆದರ ಆತ ಕೋಣೆಗೆ ವಾಪಸ್ಸಾಗಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿಯು ತನ್ನ ಪತಿಯನ್ನು ಹುಡುಕುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆಯಲ್ಲಿ ಇಬ್ಬರು ಸುಫಾರಿ ಹಂತಕರು ಮಹಿಳೆಯ ಮೇಲೆ ದಾಳಿ ಮಾಡಿದ್ದಾರೆ.


ರಕ್ತಸಿಕ್ತವಾಗಿದ್ದ ಮಹಿಳೆಯು ಹೇಗೋ ಹರಸಾಹಸ ಪಟ್ಟು ಮನೆಗೆ ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಹಾಗೂ ನೆರೆಹೊರೆಯವರನ್ನು ಎಚ್ಚರಿಸಿದ್ದಾಳೆ. ಕೂಡಲೇ ನೆರೆಹೊರೆಯವರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ನೆರೆಹೊರೆಯವರೇ ಪತಿಯನ್ನು ಹಾಗೂ ಒಬ್ಬ ಕೊಲೆಗಾರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಮತ್ತೊಬ್ಬ ಸುಪಾರಿ ಹಂತಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ. ಬಂಧಿತ ಪತಿಯನ್ನು ರಾಜೇಶ್​ ಝಾ ಎಂದು ಗುರುತಿಸಲಾಗಿದೆ. ಹಾಗೂ ಪೊಲೀಸರ ವಶಕ್ಕೆ ಸಿಕ್ಕ ಸುಪಾರಿ ಹಂತಕನನ್ನು ಸುರಜೀತ್​ ಎಂದು ಗುರುತಿಸಲಾಗಿದೆ.

Kolkata man hires contract killer to murder wife who bought phone without ‘permission’

ಇದನ್ನು ಓದಿ : Bank fraud : ಬ್ರಹ್ಮಾವರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ

ಇದನ್ನೂ ಓದಿ : UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

RELATED ARTICLES

Most Popular