ಸೋಮವಾರ, ಏಪ್ರಿಲ್ 28, 2025
HomeCrimeKumuli Road Accident : ಕಂದಕಕ್ಕೆ ಉರುಳಿದ ಕಾರು : 8 ಮಂದಿ ಶಬರಿಮಲೆ ಯಾತ್ರಿಕರ...

Kumuli Road Accident : ಕಂದಕಕ್ಕೆ ಉರುಳಿದ ಕಾರು : 8 ಮಂದಿ ಶಬರಿಮಲೆ ಯಾತ್ರಿಕರ ಸಾವು, ಇಬ್ಬರಿಗೆ ಗಂಭೀರ ಗಾಯ

- Advertisement -

ಕುಮುಳಿ: ಶುಕ್ರವಾರ ತಡರಾತ್ರಿ ಸಂಬಂವಿಸಿದ್ದ ರಸ್ತೆ ಅಪಘಾತದಲ್ಲಿ (Kumuli Road Accident) ಶಬರಿಮಲೆ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ 8 ಮಂದಿ ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ತಮಿಳುನಾಡಿನ ತೇಣಿ ಜಿಲ್ಲೆಯ ಕುಮುಲಿ ಮೌಂಟೇನ್‌ ಪಾಸ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಥೇಣಿ ಆಂಡಿಪಟ್ಟಿಯ ಮೂಲದವರಾಗಿದ್ದಾರೆ. ಈ ಅಪಘಾತದಲ್ಲಿ ಕಾರು 40 ಅಡಿ ಆಳದ ಹೊಂಡಕ್ಕೆ ಉರುಳಿದ ಪರಿಣಾಮವಾಗಿ ಎಂಟು ಜನ ಶಬರಿಮಲೆ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅದೇ ಕಾರಿನಲ್ಲಿ ಮಗು ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ : Charles Sobhraj : ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ಗೆ ನೇಪಾಳ ಜೈಲಿನಿಂದ ಸಿಕ್ತು ಬಿಡುಗಡೆ ಭಾಗ್ಯ

ಇದನ್ನೂ ಓದಿ : Sikkim road accident: ಕಮರಿಗೆ ಉರುಳಿ ಬಿದ್ದ ಸೇನಾ ವಾಹನ: 16 ಮಂದಿ ಸೇನಾ ಯೋಧರ ಸಾವು

ಇದನ್ನೂ ಓದಿ : Kidnapp and Rape Case : 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ : ಸಿಸಿಟಿವಿಯಲ್ಲಿ ಕಾಮುಕನ ನೀಚಕೃತ್ಯ

ವ್ಯಾನ್‌ನ ಚಾಲಕನಿಗೆ ವಾಹನದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿ ಆಗಿದೆ. ಈ ಎಲ್ಲಾ ಯಾತ್ರಿಕರು ದುರದೃಷ್ಟಕರ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಸಂಖ್ಯೆಯ ಸಾವು ಆಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳಕ್ಕೆ ಬಂದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಈ ಅಪಘಾತದ ಬಗ್ಗೆ ಸುದ್ದಿ ತಿಳಿದ ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ವಿ ಮುರುಳೀಧರನ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ, “ಇಡುಕ್ಕಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಬರಿಮಲೆ ಯಾತ್ರಿಕರ ನಿಧನದಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ. ಗಾಯಾಳುಗಳು ಶೀಘ್ರ ಮತ್ತು ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : Islamabad Suicide bomb blast: ಇಸ್ಲಾಮಾಬಾದ್‌ ನಲ್ಲಿ ಆತ್ಮಹತ್ಯಾ ಬಾಂಬ್‌ ಸ್ಪೋಟ: ಓರ್ವ ಪೊಲೀಸ್‌ ಸಾವು, ಆರು ಮಂದಿ ಗಾಯ

Kumuli Road Accident: Car fell into ditch: 8 Sabarimala pilgrims killed, 2 seriously injured

RELATED ARTICLES

Most Popular