ಸೋಮವಾರ, ಏಪ್ರಿಲ್ 28, 2025
HomeCrimeಗೋಲ್ಡನ್ ಟೆಂಪಲ್ ಬಳಿ ಬಾರೀ ಶಬ್ದ, ತನಿಖೆ ಚುರುಕುಗೊಳಿಸಿದ ಪೊಲೀಸರು

ಗೋಲ್ಡನ್ ಟೆಂಪಲ್ ಬಳಿ ಬಾರೀ ಶಬ್ದ, ತನಿಖೆ ಚುರುಕುಗೊಳಿಸಿದ ಪೊಲೀಸರು

- Advertisement -

ಅಮೃತಸರ : ಗೋಲ್ಡನ್ ಟೆಂಪಲ್ (Golden Temple) ಸುತ್ತಮುತ್ತಲಿನ ಶ್ರೀ ಗುರು ರಾಮ್ ದಾಸ್ ನಿವಾಸ್ ಬಳಿ ಗುರುವಾರ ಬೆಳ್ಳಂಬೆಳಗ್ಗೆ ಬಾರೀ ಸದ್ದು ಕೇಳಿಸಿದೆ. ಸದ್ದು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ 12.15 ರಿಂದ 12.30ರ ಅವಧಿಯಲ್ಲಿ ಈ ಸದ್ದು ಕೇಳಿಸಿದ್ದು, ಘಟನೆಯಿಂದಾಗೊ ಸ್ಪೋಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ನೌನಿಹಾಲ್ ಸಿಂಗ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿ 12.15 ರಿಂದ 12.30 ರ ಸುಮಾರಿಗೆ ದೊಡ್ಡ ಶಬ್ದ ಕೇಳಿಸಿದೆ. ಹೀಗಾಗಿ ಮತ್ತೊಂದು ಸ್ಫೋಟವಾಗುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕಟ್ಟಡದ ಹಿಂದೆ ನಾವು ಕೆಲವು ಅವಶೇಷಗಳನ್ನು ಕಂಡುಕೊಂಡಿದ್ದೇವೆ. ಆದರೆ ಕತ್ತಲಾಗಿರುವುದರಿಂದ ನಾವು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಶಂಕಿತರನ್ನು ಬಂಧಿಸಲಾಗುತ್ತಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಶ್ರೀ ಗುರು ರಾಮ್ ದಾಸ್ ನಿವಾಸ್ ಇದು ಅತ್ಯಂತ ಹಳೆಯ ‘ಸಾರೈ’ (ಲಾಡ್ಜ್) ಆಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಫೋರೆನ್ಸಿಕ್ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಇಲ್ಲಿನ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಮೇ 6 ರಂದು ಸ್ಫೋಟ ಸಂಭವಿಸಿದ ಸ್ಥಳಕ್ಕೆ ಸಮೀಪದಲ್ಲಿ ಮೇ 8 ರಂದು ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೆಸ್ಟ್

ಇದನ್ನೂ ಓದಿ : ಶ್ರದ್ಧಾ ವಾಕರ್‌ ಕೊಲೆ ಪ್ರಕರಣ : ದೆಹಲಿ ಕೋರ್ಟ್‌ನಿಂದ ಮಹತ್ವದ ತೀರ್ಪು

ಶನಿವಾರ ನಡೆದ ಗೋಲ್ಡನ್ ಟೆಂಪಲ್‌ಗೆ ಹೋಗುವ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಅದೇ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿನ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಕ್ತರು ಮತ್ತು ಸ್ಥಳೀಯರು ಆರಂಭದಲ್ಲಿ ಇದು ಭಯೋತ್ಪಾದಕ ದಾಳಿ ಎಂದು ಭಾವಿಸಿದ್ದರು. ಆದರೆ, ಸ್ಫೋಟವು ಅಪಘಾತ ಅಥವಾ ಯಾವುದೇ ಕಿಡಿಗೇಡಿತನದ ಕೃತ್ಯವಾಗಿರಬಹುದು ಎಂದು ಪೊಲೀಸರು ನಂತರ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಸೇತುವೆಯಿಂದ ಕೆಳಗೆ ಉರುಳಿದ ಬಸ್ : 14 ಮಂದಿ ದುರ್ಮರಣ

ಇದನ್ನೂ ಓದಿ : ಸಕಲ ಸರಕಾರಿ ಗೌರವದೊಂದಿಗೆ ಬಲರಾಮ ಆನೆ ಅಂತ್ಯಕ್ರಿಯೆ : ಭಾವುಕ ವಿದಾಯ

Loud noise near Golden Temple, police intensified investigation

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular