ಸೋಮವಾರ, ಏಪ್ರಿಲ್ 28, 2025
HomeCrime100 ರೂಪಾಯಿ ಸಾಲ ವಾಪಸ್​ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಕೊಂದ ಭೂಪ ಅರೆಸ್ಟ್​

100 ರೂಪಾಯಿ ಸಾಲ ವಾಪಸ್​ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಕೊಂದ ಭೂಪ ಅರೆಸ್ಟ್​

- Advertisement -

ದೆಹಲಿ : ಸ್ನೇಹಿತರು ಅಂದಮೇಲೆ ಸಾಲ ತೆಗೆದುಕೊಳ್ಳುವುದು ಕಾಮನ್​. 100 , 200ರಿಂದ ಹಿಡಿದು ಸ್ನೇಹಿತರ (Man Kills Friend) ಬಳಿಯಲ್ಲಿ ಲಕ್ಷಗಟ್ಟಲೇ ರೂಪಾಯಿ ಸಾಲ ಪಡೆದುಕೊಳ್ಳುವವರು ಇದ್ದಾರೆ. ಈ ಸಾಲ ಪಡೆದ ಸ್ನೇಹಿತರು ಸರಿಯಾದ ಸಮಯಕ್ಕೆ ಅದನ್ನು ತೀರಿಸಿದರೆ ಯಾವುದೇ ಸಮಸ್ಯೆ ಇರೋದಿಲ್ಲ. ಆದರೆ ಹಣವನ್ನು ತೀರಿಸಿಲ್ಲ ಅಂದಾಗಲೇ ನಿಜವಾದ ಸಮಸ್ಯೆ ಆರಂಭವಾಗುತ್ತದೆ. ಹಣ ವಾಪಸ್​ ಕೇಳಿದರೆ ಸ್ನೇಹ ಹಾಳಾಗುತ್ತೆ. ಕೇಳಿಲ್ಲ ಅಂದರೆ ಕೊಟ್ಟ ಹಣ ವಾಪಸ್​ ಬರೋದಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಯದು.


ಇಂತದ್ದೇ ಒಂದು ಪರಿಸ್ಥಿತಿಗೆ ಸಿಲುಕಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಅದು ಕೇವಲ 100 ರೂಪಾಯಿಗಾಗಿ ಸ್ನೇಹಿತನನ್ನು ಹತ್ಯೆಗೈಯಲಾಗಿದೆ..! ದೆಹಲಿಯ ದಹಿಸರ್​ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪ್ಲಾಸ್ಟಿಕ್​ ಪೈಪ್​ನಿಂದ ತನ್ನ ಸ್ನೇಹಿತನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಆತನ ಮೃತದೇಹವನ್ನು ಸುಡಲು ಯತ್ನಿಸಿದ್ದ ಎಂದು ಡಿಸಿಪಿ ಸೋಮನಾಥ್​ ಘರ್ಗೆ ಹೇಳಿದ್ದಾರೆ.


100 ರೂಪಾಯಿ ಹಿಂತಿರುಗಿಸಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯು ಆತನ ಗೆಳೆಯನನ್ನು ಕೊಲೆ ಮಾಡಿದ್ದು ಆತನನ್ನು ನಾವು ಬಂಧಿಸಿದ್ದೇವೆ. ಆತ ಪ್ಲಾಸ್ಟಿಕ್​ ಪೈಪ್​ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಅವನ ದೇಹವನ್ನು ಸುಡುವ ಮೂಲಕ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾನೆ ಎಂದು ಡಿಸಪಿ ಸೋಮನಾಥ್​ ಮಾಹಿತಿ ನೀಡಿದ್ದಾರೆ.

Maharashtra: Man Kills Friend For Not Returning Rs 100, Arrested By Mumbai Police

ಇದನ್ನು ಓದಿ : CSK IPL 2022 : ಚೆನ್ನೈ ಸೂಪರ್‌ ಕಿಂಗ್ಸ್‌ ಈ 3 ಆಟಗಾರರನ್ನು ಖರೀದಿಸೋದು ಖಚಿತ

ಇದನ್ನೂ ಓದಿ : ಹಿಜಬ್​ ಪರ ದನಿಯೆತ್ತಿದ ಮಲಾಲಾ ವಿರುದ್ಧ ಕೌಂಟರ್​ ಮೇಲೆ ಕೌಂಟರ್​ ಕೊಟ್ಟ ಬಿಜೆಪಿ ನಾಯಕರು

RELATED ARTICLES

Most Popular