ಸೋಮವಾರ, ಏಪ್ರಿಲ್ 28, 2025
HomeCrimeMaharashtra Road Accident : ಎರಡು ಬಸ್‌ಗಳು ಮುಖಾಮುಖಿ ಢಿಕ್ಕಿ 6 ಮಂದಿ ಸಾವು :...

Maharashtra Road Accident : ಎರಡು ಬಸ್‌ಗಳು ಮುಖಾಮುಖಿ ಢಿಕ್ಕಿ 6 ಮಂದಿ ಸಾವು : 25ಕ್ಕೂ ಅಧಿಕ ಮಂದಿಗೆ ಗಾಯ

- Advertisement -

ಮಹಾರಾಷ್ಟ್ರ : ಮುಂಜಾನೆ ಎರಡು ಬಸ್‌ಗಳು ಮುಖಾಮುಖಿ ಢಿಕ್ಕಿಯಾಗಿ (Maharashtra Road Accident) ಆರು ಜನರು ಸಾವನ್ನಪ್ಪಿದ್ದು, ಸುಮಾರು 25 ರಿಂದ 30 ಜನರು ಗಾಯಗೊಂಡಿದ್ದಾರೆ. ಈ ಆಘಾತಕಾರಿ ಅಪಘಾತದಲ್ಲಿ ಗಾಯಗೊಂಡವರ ಅಕ್ರಂದನ ಮುಗಿಲು ಮುಟ್ಟಿತ್ತು.

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ ನಗರದ ಬಳಿ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಮುಂಜಾನೆ 3 ಗಂಟೆಗೆ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು. ಅಧಿಕಾರಿಯ ಪ್ರಕಾರ, ಅಪಘಾತಕ್ಕೀಡಾದ ಬಸ್‌ಗಳಲ್ಲಿ ಒಂದರಲ್ಲಿ ಅಮರನಾಥ ಯಾತ್ರೆಯಿಂದ ಹಿಂದಿರುಗುವ ಪ್ರಯಾಣಿಕರು ಹಿಂಗೋಲಿ ಕಡೆಗೆ ಹೋಗುತ್ತಿದ್ದರೆ, ಇನ್ನೊಂದು ಬಸ್ ನಾಗ್ಪುರದಿಂದ ನಾಸಿಕ್‌ಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ : Delhi Crime News : ವಿದ್ಯಾರ್ಥಿನಿ ಮದುವೆ ನಿರಾಕರಿಸಿದಕ್ಕೆ ರಾಡ್‌ನಿಂದ ಹೊಡೆದು ಕೊಂದ ವ್ಯಕ್ತಿ

ಇದನ್ನೂ ಓದಿ : Udupi College Toilet Video Case : ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣ : 3 ವಿದ್ಯಾರ್ಥಿನಿಯರಿಗೆ ಷರತ್ತು ಬದ್ದ ಜಾಮೀನು

ಅಪಘಾತದ ಕುರಿತು ಮಾತನಾಡಿದ ಮಲ್ಕಾಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶೋಕ್ ತ್ರಿಪಾಠಿ, ಒಂದು ಬಸ್ ಅಮರನಾಥ ಯಾತ್ರೆಗೆ ಹಿಂಗೋಲಿಗೆ ತೆರಳುತ್ತಿದ್ದರು. ಇನ್ನೊಂದು ಬಸ್ ನಾಗ್ಪುರದಿಂದ ನಾಸಿಕ್‌ಗೆ ಹೋಗುತ್ತಿತ್ತು. ಮುಂಜಾನೆ 3.00 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಜನರಲ್ಲಿ ಗೊಂದಲ ಉಂಟಾಯಿತು ಎಂದು ತ್ರಿಪಾಠಿ ಹೇಳಿದರು. ಮಾಹಿತಿ ಪಡೆದ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. “ಇದುವರೆಗೆ 6 ಜನರ ಸಾವು ದೃಢಪಟ್ಟಿದ್ದು, ನಾಲ್ಕೈದು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ” ಎಂದು ಅವರು ಹೇಳಿದರು. ಘಟನೆಯ ನಂತರ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಇದೀಗ ಅದನ್ನು ಪುನಃಸ್ಥಾಪಿಸಲಾಗಿದೆ.

Maharashtra Road Accident: 6 killed in two buses head-on collision: 25 more injured

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular