ಮುಂಬೈ : Maharashtra Shocker: ಮನೆ ಅಂದಮೇಲೆ ಅದನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿರುತ್ತದೆ. ಆದರೆ ಇಲ್ಲೊಂದು ಕಡೆಯಲ್ಲಿ ಮನೆಯನ್ನು ಸ್ವಚ್ಛ ಮಾಡುವ ವಿಚಾರದಲ್ಲಿ ಶುರುವಾದ ಜಗಳವು ತಾರಕಕ್ಕೇರಿದ ಪರಿಣಾಮ ವ್ಯಕ್ತಿಯೊಬ್ಬನ ಕೊಲೆಯೇ ನಡೆದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ಸಂಭವಿಸಿದ್ದು 27 ವರ್ಷದ ವ್ಯಕ್ತಿಯನ್ನು ಕೊಲೆ ಆರೋಪದಡಿಯಲ್ಲಿ ಎಂಐಡಿಸಿ ಪೊಲೀಸರು ಬಂಧಿಸಿದ್ದಾರೆ. ಈತ ಮನೆಯನ್ನು ಸ್ವಚ್ಛ ಮಾಡುವ ವಿಚಾರದಲ್ಲಿ ತನ್ನ 20 ವರ್ಷದ ರೂಮ್ಮೇಟ್ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ಮನೋಜ್ ಪುಲ್ವನಾಥ್ ಮೇಡಕ್ ಎಂದು ಗುರುತಿಸಲಾಗಿದ್ದು ಈತ ತನ್ನ ರೂಮ್ಮೇಟ್ ದೇಬಾಜಿತ್ ಧಂಧಿರಾಮ್ ಚಾರೋಹ್ ಎಂಬಾತನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ .
ಈ ಇಬ್ಬರೂ ಮೂಲತಃ ಆಸ್ಸಾಂನವರಾಗಿದ್ದಾರೆ. ಇವರು ಮಹಪೆಯಲ್ಲಿರುವ ಪ್ರಯೋಗಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇದೇ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು . ಚಾರೋಹ್ ಎಂಬಾತ ಕುಡುಕನಾಗಿದ್ದು ಮದ್ಯದ ನಶೆಯಲ್ಲಿ ಮೇಡಕ್ಗೆ ಮನೆಯನ್ನು ಕ್ಲೀನ್ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಮನೆಗೆಲಸದ ವಿಚಾರದಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಯಾವಾಗಲೂ ಕುಡಿದು ಬರ್ತಿದ್ದ ಚಾರೋಹ್ ಮನೆಗೆಲಸ ಮಾಡುವಂತೆ ಮೇಡಕ್ಗೆ ಒತ್ತಡ ಹೇರುತ್ತಿದ್ದ ಆದರೆ ಈ ಬಾರಿ ಇದೇ ವಿಚಾರವಾಗಿ ಗಲಾಟೆ ನಡೆಯುತ್ತಿದ್ದಾಗ ಚಾರೋಹ್ ಮರದ ಹಲಗೆಯಿಂದ ಮೇಡಕ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮೇಡಕ್ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಚಾರೋಹ್ನ ಕುತ್ತಿಗೆಯನ್ನು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚಾರೋಹ್ನನ್ನು ಮಣಿಪಾಲ ಆಸ್ಪತ್ರೆಗೆ ಆತನ ಇತರೆ ಸ್ನೇಹಿತರು ಕರೆದುಕೊಂಡು ಹೋದರಾದರೂ ಸಹ ಅಲ್ಲಿಜ ವೈದ್ಯರು ಈತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ ಅಂತಾ ಎಂಐಡಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎನ್ನಲಾಗಿದೆ.
ಇದನ್ನು ಓದಿ : Petrol and Diesel price down : ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಸಿಎಂ ಬಸವರಾಜ್ ಬೊಮ್ಮಾಯಿ ಸುಳಿವು
ಇದನ್ನೂ ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್ ನಾಯಕ
Maharashtra Shocker: 27-Year-Old Man Stabs Roommate After Fight Over Household Work