ಸೋಮವಾರ, ಏಪ್ರಿಲ್ 28, 2025
HomeCinemaMalayalam Actor Sahana : ಖ್ಯಾತ ನಟಿ ಸಹನಾ ನಿಗೂಢ ಸಾವು : ಪತಿ‌ ಸಜ್ಜದ್...

Malayalam Actor Sahana : ಖ್ಯಾತ ನಟಿ ಸಹನಾ ನಿಗೂಢ ಸಾವು : ಪತಿ‌ ಸಜ್ಜದ್ ಅರೆಸ್ಟ್‌, ತಾಯಿ ಬಹಿರಂಗ ಹೇಳಿಕೆ

- Advertisement -

ಕೇರಳ : ಖ್ಯಾತ ಮಲಯಾಲಂ ನಟಿ ಸಹನಾ ( Malayalam Actor Sahana) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನಟಿಯ ಸಾವಿನ ಪ್ರಕರನ ಇದೀಗ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಹನಾ ಪೋಷಕರು ನೀಡಿದ ದೂರಿನ ಬೆನ್ನಲ್ಲೇ ಪೊಲೀಸರು ಪತಿ ಸಜ್ಜದ್‌ನನ್ನು ಬಂಧಿಸಿದ್ದಾರೆ. ಇದೀಗ ಸಜ್ಜದ್‌ ತಾಯಿ ಮಗ ಹಾಗೂ ಸೊಸೆಯ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.

ಮೇ 12 ರಂದು ಕೇರಳದ ಕೋಝಿಕ್ಕೋಡ್‌ನಲ್ಲಿರುವ ತನ್ನ ಫ್ಲಾಟ್‌ನಲ್ಲಿ 20 ವರ್ಷದ ನಟಿ ಮಾಡೆಲ್ ಸಹನಾ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸಹನಾ ತನ್ನ 21 ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿದ ದಿನದಂದು ಆಕೆಯ ದೇಹವು ತನ್ನ ಫ್ಲಾಟ್‌ನಲ್ಲಿ ಕಿಟಕಿಯ ಗ್ರಿಲ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಹನಾ ಪೋಷಕರು ತಮ್ಮ ಮಗಳು ತನ್ನ ಪತಿ ಸಜ್ಜದ್‌ನಿಂದ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿಯಾಗಿರುವ ಸಹನಾ ( Malayalam Actor Sahana) ಅವರು ತಮ್ಮ ಪತಿ ಸಜ್ಜದ್ ಅವರೊಂದಿಗೆ ಕೋಝಿಕ್ಕೋಡ್‌ನ ಪರಂಬಿಲ್ ಬಜಾರ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿ ದ್ದರು. ಗುರುವಾರ ರಾತ್ರಿ 11 ಗಂಟೆಗೆ ಆಕೆಯ ಶವವನ್ನು ಆಕೆಯ ನಿವಾಸದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಜ್ಜದ್ ತಮ್ಮ ಮಗಳನ್ನು ಕೊಲೆ ಮಾಡಿರಬಹುದು ಎಂದು ಮೃತನ ಪೋಷಕರು ಆರೋಪಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಆದರೆ ಕೊಲೆ ಮಾಡಲಾಗಿದೆ ಎಂದು ಸಹನಾಳ ತಾಯಿ ಒತ್ತಾಯಿಸಿದ್ದಾರೆ. ಸಜ್ಜದ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಸಹನಾ ನಿತ್ಯವೂ ಕೊರಗುತ್ತಿದ್ದಳು. ಸಜ್ಜದ್ ಅವರ ಕುಟುಂಬ ಸದಸ್ಯರು ತನ್ನ ಮಗಳಿಗೆ ಕಿರುಕುಳ ನೀಡಿದ್ದರು, ನಂತರ ಅವರು ಪ್ರತ್ಯೇಕವಾಗಿ ವಾಸಿಸುವಂತೆ ಕೇಳಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಸಹನಾ ( Malayalam Actor Sahana) ಪತಿ ಸಜ್ಜದ್‌, ಕಿರುಕುಳ ಇಷ್ಟಕ್ಕೇ ಮುಗಿಯಲಿಲ್ಲ. ಪತಿ ನಿತ್ಯ ಹಣ ಕೇಳುತ್ತಿದ್ದ. ಸಹನಾ ತನ್ನ ಕುಟುಂಬದಿಂದ ಪಡೆದ ಚಿನ್ನಾಭರಣಗಳನ್ನು ಸಜ್ಜದ್ ಮಾರಾಟ ಮಾಡಿದ್ದಾಳೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಸಹನಾ ತನ್ನ ಹುಟ್ಟುಹಬ್ಬದಂದು ತನ್ನ ಕುಟುಂಬವನ್ನು ಭೇಟಿಯಾಗಲು ಬಯಸಿದ್ದಳು. ಆದರೆ ಪತಿ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಅಲ್ಲದೇ ಫ್ಲ್ಯಾಟ್‌ನಲ್ಲಿ ಸಹನಾ ಯಾರನ್ನೂ ಭೇಟಿಯಾಗಲು ಅವಕಾಶ ನೀಡುತ್ತಿರಲಿಲ್ಲ ಎಂದು ಸಹನಾ ತಾಯಿ ಆರೋಪಿಸಿದ್ದಾರೆ.

ಮಗಳನ್ನು ( Malayalam Actor Sahana) ಕೊಲೆ ಮಾಡಲಾಗಿದೆ ಎಂದ ತಾಯಿ

ನನ್ನ ಮಗಳು ಎಂದಿಗೂ ಆತ್ಮಹತ್ಯೆಯಿಂದ ಸಾಯುವುದಿಲ್ಲ, ಅವಳನ್ನು ಕೊಲ್ಲಲಾಯಿತು. ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆಕೆ ಸದಾ ಅಳುತ್ತಿದ್ದಳು. ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಆತನ ತಂದೆ-ತಾಯಿ ಮತ್ತು ಸಹೋದರಿ ಕೂಡ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದರು, ಆಗ ಪ್ರತ್ಯೇಕ ಮನೆಗೆ ತೆರಳುವಂತೆ ಸೂಚಿಸಿದ್ದೆ. ಆ ನಂತರವೂ ನನ್ನ ಮಗಳು ತನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ, ಹಣದ ಆಸೆ ಇದೆ ಎಂದು ಹೇಳಿದ್ದಾಳೆ ಎಂದು ತಾಯಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸಜ್ಜದ್‌ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾನೆ. ತಾನು ತನ್ನ ಪತ್ನಿ ಸಹನಾಳ ಶವವನ್ನು ಬಾತ್‌ರೂಮ್‌ನಲ್ಲಿ ಕಂಡಿದ್ದೇನೆ. ಈ ವಿಚಾರದಲ್ಲಿ ತಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದಿದ್ದಾನೆ.

ಸಿನಿಮಾ ಹಣದ ವಿಚಾರದಲ್ಲಿ ಕಿರಿಕ್‌ !

ಸಹನಾ ಅನೇಕ ಆಭರಣಗಳ ಜಾಹೀರಾತುಗಳನ್ನು ಮಾಡಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಸಜ್ಜದ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಗೂ ಮುನ್ನ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಜ್ಜದ್, ಬಳಿಕ ಅಲ್ಲಿಯೇ ಕೆಲಸ ಬಿಟ್ಟು ಮನೆಯಲ್ಲಿ ವಾಸಿಸಲು ಆರಂಭಿಸಿದ್ದ. ಎಸಿಪಿ ಪ್ರಕಾರ, “ಅವರು ಇತ್ತೀಚೆಗೆ ಚಲನಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು, ಅದಕ್ಕಾಗಿ ಅವರು ಸ್ವಲ್ಪ ಹಣವನ್ನು ಪಡೆದಿದ್ದರು. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆ ಅವಳ ಹುಟ್ಟುಹಬ್ಬ, ಆದರೆ ಅವನು ತಡವಾಗಿ ಬಂದಿದ್ದಾನೆ . ಇದೇ ವಿಚಾರಕ್ಕೆ ಜಗಳವಾಗಿರಬಹುದು ಎನ್ನಲಾಗುತ್ತಿದೆ.

ಸಹನಾ ( Malayalam Actor Sahana) ಸಾವಿನಲ್ಲಿ ಮಗನ ಪಾತ್ರವಿಲ್ಲ : ಸಜ್ಜದ್‌ ತಾಯಿ

ಸಹನಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜದ್‌ ತಾಯಿ ಮಲಯಾಲಂ ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಹನಾ ಸಾವಿನಲ್ಲಿ ತನ್ನ ಪಾತ್ರವಿಲ್ಲ. ಮಗ ಹಾಗೂ ಸೊಸೆ ಹಲವು ಸಮಯದ ಹಿಂದೆಯೇ ಮನೆಯನ್ನು ತೊರೆದಿದ್ದಾರೆ. ಅಲ್ಲದೇ ನಂತರದಲ್ಲಿ ನಮ್ಮ ಜೊತೆಗೆ ಹೆಚ್ಚು ಸಂಪರ್ಕದಲ್ಲಿಯೂ ಇಲ್ಲ. ಮದುವೆಯಾದ ದಿನದಿಂದಲೂ ಇಬ್ಬರು ಜಗಳವಾಡುತ್ತಿದ್ದರು. ಒಂದೊಮ್ಮೆ ಮಗ ಅಪರಾಧ ಮಾಡಿದ್ದಾರೆ ಅವನನ್ನು ಶಿಕ್ಷೆಗೆ ಗುರಿಪಡಿಸಲಿ ಎಂದಿದ್ದಾರೆ.

ಇದನ್ನೂ ಓದಿ : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ

ಇದನ್ನೂ ಓದಿ : ಆಗತಾನೆ ಜನಿಸಿದ ಕಂದಮ್ಮನನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಪಾಪಿ ತಾಯಿ

Kerala Malayalam Actor Sahana death case husband Sajjad arrest

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular