ಬೆಂಗಳೂರು : blackmailing woman : ವೈವಾಹಿಕ ಸಂಬಂಧ ಕೂಡಿಬರುವುದು ಸುಲಭವಾಗಲಿ ಎಂಬ ಕಾರಣಕ್ಕೆ ಮ್ಯಾಟ್ರಿಮೋನಿಯಂತಹ ಸಾಕಷ್ಟು ವೆಬ್ಸೈಟ್ಗಳು ಮುನ್ನಲೆಗೆ ಬಂದಿವೆ. ಇದೇ ಕನ್ನಡ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ಬ್ಲ್ಯಾಕ್ ಮಾಡಲು ಮುಂದಾಗಿದ್ದ ಭೂಪ ಇದೀಗ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಈಶಾನ್ಯ ವಿಭಾಗದ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ಆರೋಪಿ ವಿಜಯ್ ಕುಮಾರ್ ನಂಬಿಸಿದ್ದ. ಇದಾದ ಬಳಿಕ ಇಬ್ಬರೂ ಸಲುಗೆಯಿಂದ ಇರಲು ಆರಂಭಿಸಿದ್ದರು. ಈ ವೇಳೆಯಲ್ಲಿ ಆರೋಪಿ ವಿಜಯ್ ಕುಮಾರ್ ಯುವತಿಯ ಜೊತೆ ಕಳೆದಿದ್ದ ಕೆಲ ಖಾಸಗಿ ಕ್ಷಣಗಳನ್ನು ಫೋಟೋ ತೆಗೆದುಕೊಂಡಿದ್ದ ಎನ್ನಲಾಗಿದೆ.
ಇದೇ ಫೋಟೋಗಳನ್ನಿಟ್ಟುಕೊಂಡು ಯುವತಿಯನ್ನು ಬ್ಲ್ಯಾಕ್ಮೇಲ್ ಮಾಡಲು ವಿಜಯ್ ಕುಮಾರ್ ಹೊಂಚು ಹಾಕಿದ್ದ. ಐವತ್ತು ಸಾವಿರ ಹಣ ನೀಡದೇ ಇದ್ದರೆ ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಆದರೆ ಯುವತಿ ಹಣ ನೀಡಲು ನಿರಾಕರಿಸಿದ್ದಳು. ಬಳಿಕ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಇಬ್ಬರು ಜೊತೆಯಾಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದ ಫೋಟೋಗಳನ್ನು ಪೋಸ್ಟ್ ಮಾಡಿದ್ದ. ಮಾತ್ರವಲ್ಲದೇ ಯುವತಿಯ ಕುಟುಂಬಸ್ಥರನ್ನು ಟ್ಯಾಗ್ ಕೂಡ ಮಾಡಿದ್ದ ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಯುವತಿಯು ವಿಜಯ್ಕುಮಾರ್ ಹಣ ನೀಡಲು ಒಪ್ಪಿದ್ದಾಳೆ. ಆ ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೋರಿ 50 ಸಾವಿರ ರೂಪಾಯಿಗಳನ್ನು ಆತನಿಗೆ ನೀಡಿದ್ದಾಳೆ.ಆದರೆ ಇಷ್ಟಕ್ಕೆ ಸುಮ್ಮನಾಗದ ಆರೋಪಿ ವಿಜಯ್ ಪದೇ ಪದೇ ಯುವತಿಯ ಎದುರು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದೇ ಇದ್ದಲ್ಲಿ ಫೋಟೋಗಳನ್ನು ನಿನ್ನ ಸಂಬಂಧಿಗಳಿಗೆ ನೀಡುತ್ತೇನೆ ಎಂದು ಬೆದರಿಸಿದ್ದಾನೆ.
ಆರೋಪಿ ವಿಜಯ್ಕುಮಾರ್ ಕಾಟದಿಂದ ಬೇಸತ್ತಿದ್ದ ಯುವತಿಯು ಈಶಾನ್ಯ ವಿಭಾಗ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಳು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ವಿಜಯ್ಕುಮಾರ್ರನ್ನು ಬಂಧಿಸಿ ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.
man arrest for blackmailing woman and demanding money in bengaluru
ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ
ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ