ಮಂಡ್ಯ : ತಂದೆ ತಾಯಿ ಮಕ್ಕಳನ್ನು ಲಾಲನೆ ಪೋಷಣೆ (Mandya Murder Case) ಮಾಡುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಹೆತ್ತ ಮಕ್ಕಳನ್ನೇ ಕೊಲ್ಲುವವರು ಇರುತ್ತಾರೆ. ಅಂತಹದರಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು, ಪತ್ನಿಗೆ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.
ಸದ್ಯ ಈ ದುರ್ಘಟನೆಯು ಶ್ರೀರಂಗಪಟ್ಟಣ ತಾಲೂಕಿನ ಮರಳಾಗಲ ಎಂಬ ಗ್ರಾಮದಲ್ಲಿ ನಡೆದಿರುತ್ತದೆ. ಈ ಆಘಾತಕಾರಿ ಘಟನೆಯಲ್ಲಿ, ಆದಿತ್ಯ (4 ವರ್ಷ) ಮತ್ತುಅಮೂಲ್ಯ (3 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೂಲತಃ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಾಣಗಾಪುರ ನಿವಾಸಿ ಶ್ರೀಕಾಂತ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರ ಗಾಯಗೊಳಿಸಿದ್ದಾನೆ ಎಂದು ವರದಿ ಮಾಡಿದೆ. ಮರಳಗಾಲದ ಬಳಿಯಿರುವ ಮನೆಯೊಂದರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಅಂಬಿಕಾ ಎಂಬವರ ಮಗಳಾದ ಲಕ್ಷ್ಮೀ ಮಂಗಳವಾರ ಪತಿ, ಮಕ್ಕಳ ಜೊತೆ ಮರಳಗಾಲಕ್ಕೆ ಬಂದಿದ್ದಾರೆ.
ಇದನ್ನೂ ಓದಿ : LPG Blast : ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಎಲ್‌ಪಿಜಿ ಸೋರಿಕೆ 31 ಮಂದಿ ಸಾವು
ಇದನ್ನೂ ಓದಿ : TV actor Prajwal : ಬಾರ್‌ನಲ್ಲಿ ಕಿರಿಕ್ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್ ದಾಖಲು
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿ ಶ್ರೀಕಾಂತ್ ತನ್ನ ಮಕ್ಕಳಿಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿರುತ್ತಾನೆ. ಇದೇ ವೇಳೆ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರವಾಗಿಗೊಳಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಘಟನೆ ಕಾರಣ ತಿಳಿದು ಬಂದಿಲ್ಲ. ಸದ್ಯ ಪತಿಯಿಂದ ಗಾಯಗೊಂಡ ಪತ್ನಿ ಲಕ್ಷ್ಮೀಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸ್ಥಳಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶಿಲನೆ ನಡೆಸಿದ್ದಾರೆ.
Mandya Murder Case: Killing of two children by the father himself: Fatal assault on the wife