Muniratna Case; ಈಗಾಗಲೇ ಜಾತಿ ನಿಂದನೆ(Caste abuse case) ಹಾಗೂ ಅತ್ಯಾಚಾರ(Rape case) ಆರೋಪದ ಅಡಿ ಜೈಲುಲಲ್ಲಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ(MLA Muniratna) ಮತ್ತೊಂದು ಕೇಸ್ ಜಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಶಾಸಕ ಮುನಿರತ್ನ ಆರ್ ಆರ್ ನಗರದ ಶಾಸಕರಾಗಿದ್ದಾಗ ಅನೇಕ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಪಾಲಿಕೆ ಆದೇಶ ನೀಡಿದೆ. ಇದು ಮುನಿರತ್ನ ಅವರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.

ಆರ್ ಆರ್ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 2020ರಿಂದ 2022ರ ವರೆಗೆ ನಡೆದ ಕಾಮಗಾರಿಗಳ(Work) ಬಗ್ಗೆ ತನಿಖೆಗೆ(Investigation) ಬೆಂಗಳೂರು ಮಾಹಾನಗರ ಪಾಲಿಕೆ ಆದೇಶ ನೀಡಿದೆ. 2020 ಸೆಪ್ಟೆಂಬರ್ ನಿಂದ 2022 ಜುಲೈ 19ರ ಈ ಅವಧಿಯಲ್ಲಿ ನಡೆದ ಕಾಮಗಾರಿಗಳ ತನಿಖೆ ಮಾಡಲು ಬಿಬಿಎಂಪಿ(BBMP) ನಿರ್ಧರಿಸಿದೆ. ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 500 ಕೋಟಿಗೂ ಅಧಿಕ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಒಟ್ಟು 500 ಕೋಟಿ ಮೊತ್ತದ ಬಿಲ್ಲು ಪಾವತಿಯಲ್ಲಿ ಅಕ್ರಮ ಆಗಿರುವ ಬಗ್ಗೆ ತನಿಖೆ ಮಾಡಲು ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕಂದಾಯ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಯಾವುದೇ ಕಾಮಗಾರಿ ನಡೆಸದೇ ಈ ಅವಧಿಯಲ್ಲಿ ಕೇವಲ ಬಿಲ್ ಮಾತ್ರ ಮಾಡಿಸಿಕೊಂಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ಚೀಫ್ ಕಮಿಷನರ್ ಸೆ. 23ರಂದು ತನಿಖೆಗೆ ಆದೇಶ ಮಾಡಿದ್ದಾರೆ. ಈ ಸಮಿತಿಯಲ್ಲಿ ಯೋಜನೆ ವಿಶೇಷ, ಹಣಕಾಸು ವಿಶೇಷ ಆಯುಕ್ತ, ಕ್ವಾಲಿಟಿ ಚೆಕ್ ಚೀಫ್ ಇಂಜಿನಿಯರ್ ಹಾಗೂ ಟಿವಿಸಿಸಿ ಚೀಫ್ ಇಂಜಿನಿಯರ್ ಇರಲಿದ್ದಾರೆ. ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಸಮಿತಿ ರಚಿಸಿ ತನಿಖೆಗೆ ಆದೇಶ ಮಾಡಿದ್ದಾರೆ.

ಇದೀಗ ಮತ್ತೆ ಮುನಿರಾಜು ಅವರಿಗೆ ಇನ್ನೊಂದು ಕೇಸ್‌ನ ಕುಣಿಕೆ ಬೀಳಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಶಾಸಕರಾಗಿ ಜನರ ಸೇವೆ ಮಾಡದೆ ಕೇವಲ ಸ್ವಾರ್ಥ ಬದುಕು ಸಾಗಿಸಿದ ಮುನಿರತ್ನ ಅವರಿಗೆ ತಕ್ಕದಾದ ಶಿಕ್ಷೆ ಆಗಬೇಕು ಎಂಬುದು ಅವರ ಕ್ಷೇತ್ರದ ಜನರ ಆಗ್ರಹ.