ಮಂಗಳವಾರ, ಏಪ್ರಿಲ್ 29, 2025
HomeCoastal NewsMLA Rohit Reddy Car Accident : ಕಾರ್ಕಳದಲ್ಲಿ ತೆಲಂಗಾಣ ಶಾಸಕ ರೋಹಿತ್‌ ರೆಡ್ಡಿ ಕಾರು...

MLA Rohit Reddy Car Accident : ಕಾರ್ಕಳದಲ್ಲಿ ತೆಲಂಗಾಣ ಶಾಸಕ ರೋಹಿತ್‌ ರೆಡ್ಡಿ ಕಾರು ಅಪಘಾತ

- Advertisement -

ಕಾರ್ಕಳ : (MLA Rohit Reddy Car Accident) ತೆಲಂಗಾಣದ ತಂಡೂರು ಶಾಸಕ ರೋಹಿತ್‌ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳ ಸಮೀಪದ ಮಿಯ್ಯಾರು ಸೇತುವೆ ಬಳಿಯ ಮುಡಾರು – ನಾಲ್ಕೂರು ಕ್ರಾಸ್‌ ಬಳಿ ಅಪಘಾತಕ್ಕೀಡಾಗಿದೆ. ಕಾರಿನ ಟಯರ್‌ ಸ್ಪೋಟಗೊಂಡು ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಸಕ ರೋಹಿತ್‌ ರೆಡ್ಡಿ ಅವರು ಶೃಂಗೇರಿಗೆ ತೆರಳುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ರೋಹಿತ್‌ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಕಾರು ವೇಗವಾಗಿ ಸಾಗುತ್ತಿತ್ತು. ಮುಡಾರು – ನಾಲ್ಕೂರು ಕ್ರಾಸ್‌ ಬಳಿಯಲ್ಲಿ ಕಾರಿನ ಟಯರ್‌ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಾರೀ ದುರಂತವೊಂದು ತಪ್ಪಿದೆ.

ಇದನ್ನೂ ಓದಿ : Covid Scam : 12,500 ಕೋಟಿ ರೂ. ಕೋವಿಡ್ ಹಗರಣ : ವಿಶೇಷ ತನಿಖಾ ತಂಡ ರಚನೆ

ಇದನ್ನೂ ಓದಿ : H1N1 infection : ಎಚ್1ಎನ್1 ಸೋಂಕಿಗೆ 13 ವರ್ಷದ ಬಾಲಕ ಬಲಿ

ಟಯರ್‌ ಸ್ಪೋಟಗೊಂಡ ತಕ್ಷಣವೇ ಕಾರನ್ನು ಚಾಲಕ ನಿಯಂತ್ರಣಕ್ಕೆ ತರುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಕಾರಿನ ಒಂದು ಭಾಗ ಮರಕ್ಕೆ ಗುದ್ದಿದ್ದು, ಜಖಂ ಆಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ರೋಹಿತ್‌ ರೆಡ್ಡಿ ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಶೃಂಗೇರಿಗೆ ತೆರಳಿದ್ದಾರೆ.

MLA Rohit Reddy Car Accident : Tandur MLA Rogit Reddy Car Accident in Karkala Udupi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular