Mosquito repellent machine : ಹುಷಾರ್‌ ! 4 ಮಂದಿಯ ಜೀವ ತೆಗೆದ ಸೊಳ್ಳೆ ನಿವಾರಕ ಯಂತ್ರ

ಚೆನ್ನೈ : ಮಳೆಗಾಲ ಶುರುವಾಗುತ್ತಿದ್ದಂತೆ ಸೊಳ್ಳೆಗಳ ಕಾಟವು ಹೆಚ್ಚಾಗುತ್ತದೆ. ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆವುದಕ್ಕಾಗಿ ಸೊಳ್ಳೆ ನಿವಾರಕ ಯಂತ್ರ (Mosquito repellent machine) ಬಳಸುತ್ತಾರೆ. ಆದರೆ ಸೊಳ್ಳೆಯಿಂದ ಮುಕ್ತಿ ಪಡೆಯುವುದಕ್ಕಾಗಿ ಬಳಸಿದ ಯಂತ್ರದಿಂದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೃದ್ಧೆ ಮತ್ತು ಅವರ ಮೂವರು ಮೊಮ್ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಚೆನ್ನೈನ ಮನಾಲಿ ಬಳಿಯ ಮಾಥುರ್ ಎಂಎಂಡಿಎಯಲ್ಲಿ ತಮ್ಮ ಮನೆಯಲ್ಲಿ ಸೊಳ್ಳೆ ನಿವಾರಕ ಯಂತ್ರದಿಂದ ಉಂಟಾದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೃದ್ಧೆ ಮತ್ತು ಅವರ ಮೂವರು ಮೊಮ್ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ದ ಮಹಿಳೆ ಸಂತಾನಲಕ್ಷ್ಮಿ (65) ಎಂದು ಗುರುತಿಸಲಾಗಿದೆ ಮತ್ತು ಆಕೆಯ ಮೊಮ್ಮಗಳಾದ ಸಂಧ್ಯಾ, ಪ್ರಿಯಾ ರಕ್ಷಿತಾ ಮತ್ತು ಪವಿತ್ರಾ, 8 ರಿಂದ 10 ವರ್ಷ ವಯಸ್ಸಿನವರು ಬೆಂಕಿ ಹೊತ್ತಿಕೊಂಡಾಗ ತಮ್ಮ ಮನೆಯಲ್ಲಿ ಮಲಗಿದ್ದರು. ಇಂದು ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರ ನೆರೆಹೊರೆಯವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : Bike accident : ಬೈಕ್‌ಗೆ ಟ್ರಕ್ ಢಿಕ್ಕಿ : ತಾಯಿ, ಮಗ ಸಾವು

ಇದನ್ನೂ ಓದಿ : Honor Killing : ಮರ್ಯಾದಾ ಹತ್ಯೆ: ಅಂತರ್ಜಾತಿ ವಿವಾಹದ ಕಾರಣಕ್ಕೆ ಯುವತಿಯನ್ನು ಕತ್ತು ಹಿಸುಕಿ ಕೊಂದ ಪೋಷಕರು

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನಾಲ್ವರು ವ್ಯಕ್ತಿಗಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಕೊಂಡರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ನಾಲ್ವರು ಕೂಡ ಸಾವನ್ನಪ್ಪಿರುವ ವಿಚಾರವನ್ನು ತಿಳಿಸಿದ್ದಾರೆ. ಕುಟುಂಬ ಸದಸ್ಯರು ಮಲಗಿದ್ದ ಕೊಠಡಿಯಲ್ಲಿ ಇರಿಸಲಾಗಿದ್ದ ಸೊಳ್ಳೆ ನಿವಾರಕ ಯಂತ್ರವು ಕೆಲವು ನೈಲಾನ್ ವಸ್ತುಗಳ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಕುಟುಂಬದ ಸದಸ್ಯರು ನಿದ್ರೆಯಲ್ಲಿ ಹೊಗೆಯನ್ನು ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂದೆಯನ್ನು ನೋಡಿಕೊಳ್ಳಲು ತಾಯಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ಮೂವರು ಮಕ್ಕಳು ರಾತ್ರಿ ಕಳೆಯಲು ಅಜ್ಜಿಯ ಮನೆಗೆ ತೆರಳಿದರು.

Mosquito repellent machine that killed four people while they were sleeping

Comments are closed.