ಭೋಪಾಲ್: MP Police Big Operation: ಮಧ್ಯಪ್ರದೇಶದ ಪೊಲೀಸರು ವೀಕೆಂಡ್ ನಲ್ಲಿ ಭರ್ಜರಿ ಬೇಟೆ ಆಡಿದ್ದಾರೆ. ಶನಿವಾರ ಹಾಗೂ ಭಾನುವಾರದಂದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದ 9 ಸಾವಿರ ಕ್ರಿಮಿನಲ್ಸ್ ಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಮಧ್ಯಪ್ರದೇಶದ ಖಾಕಿಪಡೆ ಕೈಗೊಂಡ ಬಹುದೊಡ್ಡ ಕಾರ್ಯಾಚರಣೆ ಇದಾಗಿದೆ.
ಕಳೆದ 2 ದಿನಗಳ ಕಾಲ ಮಧ್ಯಪ್ರದೇಶದೆಲ್ಲೆಡೆ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಸಾವಿರಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗಾಗಿ ಮಧ್ಯಪ್ರದೇಶ ಪೊಲೀಸ್ ಇಲಾಖೆ ರಾಜ್ಯದೆಲ್ಲೆಡೆ ಸುಮಾರು 17 ಸಾವಿರ ಪೊಲೀಸರನ್ನು ನಿಯೋಜಿಸಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Punjab Police Station : ಪಂಜಾಬ್ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ : ರಾಕೆಟ್ ಲಾಂಚರ್ ವಶಪಡಿಸಿಕೊಂಡ ಎನ್‌ಐಎ
ರಾಜ್ಯದಲ್ಲಿ ಕಾನೂನು ಸುವ್ಯಸವ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಶಾಂತಿ ಸ್ಥಾಪಿಸುವ ಹಿನ್ನೆಲೆ ಪೊಲೀಸರು ಶನಿವಾರ ಹಾಗೂ ಭಾನುವಾರದಂದು ಈ ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗಳು, ಕ್ರಿಮಿನಲ್ಸ್ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪಿಗಳನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗಟ್ಟಲಾಗಿದೆ. ಇಡೀ ಮಧ್ಯಪ್ರದೇಶದಾದ್ಯಂತ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.
ವಿವಿಧ ವಲಯಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಗಳು, ಡೆಪ್ಯೂಟಿ ಇನ್ಸ್ ಪೆಕ್ಟರ್ ಗಳು, ಎಸ್‍ಪಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ 9 ಸಾವಿರಕ್ಕೂ ಹೆಚ್ಚು ಕ್ರಿಮಿನಲ್ಸ್ ಸೆರೆಸಿಕ್ಕಿದ್ದು, ಕಾರ್ಯಾಚರಣೆ ವೇಳೆ ಇನ್ನೂ ಕೆಲವರು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: PM Kisan Update : ಪಿಎಂ ಕಿಸಾನ್ ಯೋಜನೆಯಿಂದ 6000 ರೂ. ಜಮೆ ಆಗಬೇಕಾ : ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ
ಇನ್ನು ಬಂಧನಕ್ಕೊಳಗಾದವರ ಪೈಕಿ 6 ಸಾವಿರ ಕ್ರಿಮಿನಲ್ಸ್ ವಿರುದ್ಧ ವಾರಂಟ್ ಗಳು ಬಾಕಿ ಉಳಿದಿದ್ದವು. 2,600 ಆರೋಪಿಗಳ ವಿರುದ್ಧ ಖಾಯಂ ವಾರಂಟ್ ಗಳಿತ್ತು ಹಾಗೂ 100 ಮಂದಿ ಕ್ರಿಮಿನಲ್ಸ್ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇನ್ನು 200 ಆರೋಪಿಗಳನ್ನು ಹಿಡಿದುಕೊಟ್ಟರೆ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Arjun Tendulkar : ಗೋವಾ ತಂಡಕ್ಕೆ ಕನ್ನಡಿಗ ಕೋಚ್, ರಣಜಿ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಸ್ಥಾನ
ಇಂಗ್ಲಿಷ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
MP Police Big Operation: Over 9 thousand criminals arrested In Madhya Pradesh Combing Operation