ಅಕ್ರಮ ಸಂಬಂಧಗಳು (Illicit relationship) ಅಂದರೇನೇ ಹಾಗೆ. ಅದು ಒಂದಲ್ಲ ಒಂದು ದಿನ ನಮ್ಮ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ. ಇಂತಹದ್ದೇ ಒಂದು ಸಂಕಷ್ಟಕ್ಕೆ ಮಹಾರಾಷ್ಟ್ರದ (Mumbai) ವೈದ್ಯೆಯೊಬ್ಬರು ಸಿಲುಕಿದ್ದಾರೆ. ಮದುವೆಯಾಗಿದ್ದರೂ ಸಹ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವೈದ್ಯೆಗೆ ( intimate video of doctor )ಕಾಂಪೌಂಡರ್ ಹಾಗೂ ಆಕೆಯ ಸ್ನೇಹಿತ (records intimate video)ಬ್ಲಾಕ್ಮೇಲ್ ( blackmails ) ಮಾಡಿದ್ದು ಮಾತ್ರವಲ್ಲದೇ ಬರೋಬ್ಬರಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಮುಂಬೈನಲ್ಲಿ ಕ್ಲಿನಿಕ್ ಹೊಂದಿದ್ದ ಮಹಿಳಾ ವೈದ್ಯೆಯು ಓಮನ್ನಲ್ಲಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಓಮನ್ನಿಂದ ವೈದ್ಯೆಗಾಗಿ ಮುಂಬೈಗೆ ಬರುತ್ತಿದ್ದ ಆತ ವೈದ್ಯೆಯೊಂದಿಗೆ ಆಸ್ಪತ್ರೆಗೆ ಕೊಠಡಿಯೊಂದರಲ್ಲಿಯೇ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದ. ಆದರೆ ವೈದ್ಯೆ ಹಾಗೂ ಓಮನ್ ವ್ಯಕ್ತಿಯ ಕಳ್ಳಾಟದ ಬಗ್ಗೆ ಇದೇ ಕ್ಲಿನಿಕ್ನಲ್ಲಿದ್ದ ಮಹಿಳಾ ಕಾಂಪೌಂಡರ್ಗೆ ಸಂಪೂರ್ಣ ಮಾಹಿತಿ ಇದ್ದಿತ್ತು.
ವೈದ್ಯೆಯ ಸ್ನೇಹಿತ ಕ್ಲಿನಿಕ್ಗೆ ಬರುವ ಮುನ್ನವೇ ತನ್ನ ಸ್ನೇಹಿತನಿಗೆ ಕಾಂಪೌಂಡರ್ ಮಾಹಿತಿ ನೀಡಿದ್ದಳು. ಬಳಿಕ ಇಬ್ಬರೂ ಸೇರಿ ವೈದ್ಯೆ ಹಾಗೂ ಆತನ ಸ್ನೇಹಿತ ಒಟ್ಟಾಗಿ ಇರುತ್ತಿದ್ದ ಕೋಣೆಗೆ ಸ್ಪೈ ಕ್ಯಾಮರಾ ಅಳವಡಿಸಿದ್ದರು. ಆದರೆ ಇದ್ಯಾವುದರ ಅರಿವೇ ಇಲ್ಲದ ಅವರಿಬ್ಬರು ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಸ್ಪೈ ಕ್ಯಾಮರಾದ ವಿಡಿಯೋ ಕೈಗೆ ಸಿಗುತ್ತಿದ್ದಂತೆಯೇ ಕಾಂಪೌಂಡರ್ ಸ್ನೇಹಿತ ಮಹಿಳೆಗೆ ಕರೆ ಮಾಡಿ ಬೆದರಿಕೆ ನೀಡಲು ಆರಂಭಿಸಿದ್ದ. 5 ಲಕ್ಷ ರೂಪಾಯಿ ಹಣ ನೀಡದೇ ಹೋದಲ್ಲಿ ವಿಡಿಯೋವನ್ನು ನಿನ್ನ ಕುಟುಂಬಸ್ಥರಿಗೆ ಕಳಿಸೋದು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿಯೂ ಹೇಳಿದ್ದ ಎನ್ನಲಾಗಿದೆ.
ನಾಲ್ಕು ದಿನಗಳ ಕಾಲ ಈ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದ ಮಹಿಳಾ ವೈದ್ಯೆ ಇದರ ಕಾಟ ತಾಳಲಾರದೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊನೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು ವಿಡಿಯೋ ವಶಪಡಿಸಿಕೊಂಡಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿಗಳು ಆ ವಿಡಿಯೋವನ್ನು ವೈದ್ಯೆಯ ಸ್ನೇಹಿತರೊಬ್ಬರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : Godman: ಮಹಿಳೆಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಬರೋಬ್ಬರಿ 38 ಲಕ್ಷ ರೂಪಾಯಿ ಪೀಕಿದ ಭೂಪ..!
ಇದನ್ನು ಓದಿ : Girl Molested : ವಿದ್ಯುತ್ ಮೀಟರ್ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ
Mumbai: Compounder records intimate video of doctor with her boyfriend, blackmails her to pay Rs 5 lakh