trying to buy minor girl :ಸರ್ಕಾರವು ಎಷ್ಟೇ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದರೂ ಸಹ ಅಲ್ಲಲ್ಲಿ ಮಕ್ಕಳ ಮಾರಾಟ ದಂಧೆಯು ನಡೆಯುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಮಕ್ಕಳ ಮಾರಾಟಕ್ಕೆ ಪೋಷಕರೇ ಕುಮ್ಮಕ್ಕು ನೀಡುತ್ತಿರುವುದು ದುರಂತ. ಇಂತಹದ್ದೇ ಒಂದು ಪ್ರಕರಣ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಂದ 3 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ 61 ವರ್ಷದ ವ್ಯಕ್ತಿಯನ್ನು ಪೊಲೀಸರು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಾಲಾಪುರದಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ಹಾಗೂ ಅಜ್ಜಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ಸೈಯದ್ ಅಲ್ತಾಫ್ ಅಲಿ ತನ್ನ ಇಳಿವಯಸ್ಸಿನಲ್ಲಿ ನನ್ನನ್ನು ನೋಡಿಕೊಳ್ಳುವವರು ಯಾರಾದರೂ ಬೇಕು ಎಂದು ಹುಡುಕುತ್ತಿದ್ದ ಎನ್ನಲಾಗಿದೆ. ಈತ ಆರು ವರ್ಷಗಳ ಹಿಂದೆ ತನ್ನ ಪತ್ನಿಗೆ ವಿಚ್ಚೇದನವನ್ನು ನೀಡಿದ್ದ. ಈತ ರೀತಿ ಹುಡುಕಾಟದಲ್ಲಿರುವುದನ್ನು ಅರಿತ ಸ್ನೇಹಿತರೊಬ್ಬರು ಬಾಲಾಪುರದ ಆಟೋ ಚಾಲಕ ಅಕೀಲ್ ಅಹಮದ್ರ ಪರಿಚಯ ಮಾಡಿಸಿಕೊಟ್ಟಿದ್ದರು ಎನ್ನಲಾಗಿದೆ. ಈತನೇ ಬಾಲಕಿಯನ್ನು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಮೊದಲ ಬಾರಿಗೆ ಬಾಲಕಿಯ ಅಜ್ಜಿ ಹಾಗೂ ತಾಯಿಯನ್ನು ಭೇಟಿಯಾದ ಸೈಯದ್ ಅಲ್ತಾಫ್ ಅಲಿ ಬಾಲಕಿ ಮಾರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಬಾಲಕಿಯ ಅಜ್ಜಿ ಹಾಗೂ ತಾಯಿ ಮೊದಲು ತಮಗೆ ಐದು ಲಕ್ಷ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸೈಯದ್ ಒಪ್ಪದ ಕಾರಣ ಮೂರು ಲಕ್ಷ ರೂಪಾಯಿಗೆ ಬಾಲಕಿ ಮಾರಾಟದ ಒಪ್ಪಂದವಾಗಿದೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಬಾಲಕಿಯ ಕುಟುಂಬ ಈ ವ್ಯವಹಾರಕ್ಕೆ ಒಪ್ಪಿಗೆ ನೀಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಖರೀದಿ ಮಾಡಲು ಸೈಯದ್ ಅಲ್ತಾಫ್ ಅಲಿ ಮುಂದಾಗುತ್ತಿದ್ದಂತೆಯೇ ಸೂಕ್ತ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಸೈಯದ್ ಅಲ್ತಾಫ್ ಅಲಿ ವಿರುದ್ಧ ಐಪಿಸಿ ಸೆಕ್ಷನ್ 370, 370 (A) r/w 511, ಪೋಸ್ಕೋ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Police arrests Mumbai man in Hyderabad for trying to buy minor girl to look after him
ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್ ಆಂಡ್ ಫಿಟ್ ಆದ ರೋಹಿತ್ ಶರ್ಮಾ