ಮೈಸೂರು : ಇದು ನಾಗರೀಕ ಸಮಾಜವೇ ತಲೆ ತಗ್ಗಿಸುವ ಘಟನೆ. ಸ್ನೇಹಿತರು ಎನಿಸಿಕೊಂಡವರೇ ನಡೆಸಿದ ಪೈಶಾಚಿಕ ಕೃತ್ಯ. ಯುವತಿಯೋರ್ವಳ ಮೇಲೆ ಸ್ನೇಹಿತರೇ ಸೇರಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಅರಮನೆ ನಗರಿ ಮೈಸೂರಿನಲ್ಲಿ (Mysore) ನಡೆದಿದೆ. ಇದೀಗ ಯುವತಿ ತನ್ನ ಸ್ನೇಹಿತರ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಅರಮನೆ ನಗರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅಂತಹದೇ ಮತ್ತೊಂದು ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಯುವತಿಯ ಸ್ನೇಹಿತರೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇದನ್ನೂ ಓದಿ : ಗುಡ್‌ನ್ಯೂಸ್ : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 9 ದಿನ ರಜೆ

ಮಡಿಕೇರಿಯಿಂದ ಮೈಸೂರಿಗೆ ಬಂದಿದ್ದ ಯುವತಿ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಈ ವೇಲೆ ಆಕೆಯ ಜೊತೆಯಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಸ್ನೇಹಿತರೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಇದೀಗ ಯುವತಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Personal Loan : ವೈಯಕ್ತಿಕ ಸಾಲ ಪಡೆಯುವ ಮುನ್ನ EMI ಯಾಕೆ ಲೆಕ್ಕ ಹಾಕಬೇಕು ?
Mysore young woman was gang-raped by her friends