ನೊಯ್ಡಾ: (Noida serial accident) ದಟ್ಟವಾದ ಮಂಜಿನಿಂದಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಂದರ ನಂತರ ಒಂದರಂತೆ ವಾಹನಗಳು ಡಿಕ್ಕಿ ಹೊಡೆದು ಹಲವಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.ಕನಿಷ್ಠ 15 ವಾಹನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡ ಘಟನೆಯ ವೀಡಿಯೊವನ್ನು ಗಾಜಿಯಾಬಾದ್ ಪೊಲೀಸರು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
“ಇಂದು, ಬೆಳಿಗ್ಗೆ 8 ಗಂಟೆಯ ಸುಮಾರಿಗೆ, ದಟ್ಟವಾದ ಮಂಜಿನಿಂದಾಗಿ, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ಪರಸ್ಪರ ಡಿಕ್ಕಿ (Noida serial accident) ಹೊಡೆದವು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಪ್ರಸ್ತುತ ಸಂಚಾರ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ಎಡಿಸಿಪಿ ಟ್ರಾಫಿಕ್ ತಿಳಿಸಿದ್ದಾರೆ.ಪೊಲೀಸರ ಪ್ರಕಾರ ಡಿಕ್ಕಿ ಹೊಡೆದ ಬಹುತೇಕ ವಾಹನಗಳು ಕಾರುಗಳಾಗಿವೆ. ಆರಂಭದಲ್ಲಿ ಡಿಕ್ಕಿ ಹೊಡೆದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ.“ಅಪಘಾತವು ಸುಮಾರು 8 ಗಂಟೆಗೆ ಸಂಭವಿಸಿದೆ ಅಪಘಾತದ ಸಮಯದಲ್ಲಿ ಹೆದ್ದಾರಿಯಲ್ಲಿ ಮಂಜಿನಿಂದಾಗಿ ಗೋಚರತೆ ತುಂಬಾ ಕಳಪೆಯಾಗಿತ್ತು. ಮುಂದೆ ಹೋಗುತ್ತಿದ್ದ ಟ್ರಕ್ ಹಠಾತ್ತನೆ ನಿಧಾನಗೊಂಡ ನಂತರ ಕಾರುಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿದಂತೆ ಒಂದೊಂದಾಗಿ 15 ವಾಹನಗಳು ಪರಸ್ಪರ ಢಿಕ್ಕಿ (Noida serial accident) ಹೊಡೆದವು.ಪರಿಣಾಮ ಹಲವು ಸಮಯಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುದೀರ್ಘ ಟ್ರಾಫಿಕ್ ಜಾಮ್ ಅನ್ನು ಪೊಲೀಸರು ತೆರವುಗೊಳಿಸಿದರು ”ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ : Lucknow car accident: ಫ್ಲೈಓವರ್ ಮೇಲಿಂದ ಬಿದ್ದ ಕಾರು: 3 ಮಂದಿ ಸಾವು, ಓರ್ವನಿಗೆ ಗಾಯ
ಇದನ್ನೂ ಓದಿ : Acid Attack On Minor Girl : ಪ್ರೇಮ ನಿವೇದನೆಯನ್ನು ನಿರಾಕರಿಸಿದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆಸಿಡ್ ದಾಳಿ
ಇದನ್ನೂ ಓದಿ : Uttar Pradesh Crime : ರಸಗುಲ್ಲಾ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Noida serial accident: Serial accident on foggy expressway: Many injured