ಒಡಿಶಾ : ಬಾಲ್‌ಸೋರ್ ಗ್ರಾಮದಲ್ಲಿ ಸಂಭವಿಸಿರುವ ಭೀಕರ ರೈಲು ದುರಂತದ ಬೆನ್ನಲ್ಲೇ ತನಿಖೆ (Odisha train accident) ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಬಾಲಸೋರ್‌ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆಯಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಈ ನಡುವಲ್ಲೇ ಬಾಲಸೋರ್ ದುರಂತಕ್ಕೆ ಕಾರಣವೇನು ಅನ್ನೋ ಕುರಿತು ಚರ್ಚೆ ಶುರುವಾಗಿದೆ. ರೈಲ್ವೆ ಸಚಿವರು ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಸಮಸ್ಯೆ ಎನ್ನುತ್ತಿದ್ರೆ, ರೈಲ್ವೆ ಬೋರ್ಡ್ ಸಿಗ್ನಲ್ ಸಮಸ್ಯೆ ಎನ್ನುತ್ತಿದೆ.
ಒಡಿಶಾದ ಬಾಲಸೋರ್ ರೈಲ್ವೇ ನಿಲ್ದಾಣದ ಬಳಿಯಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು – ಔರಾ ಎಕ್ಸ್‌ಪ್ರೆಸ್ ರೈಲಿನ ನಡುವೆ ದುರಂತ ಸಂಭವಿಸಿತ್ತು. ಭೀಕರ ರೈಲ್ವೆ ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದು, 900ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ರೈಲ್ವೆ ದುರಂತಕ್ಕೆ ಪ್ರಾಥಮಿಕ ತನಿಖೆಯಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ. ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖುದ್ದು ಭೇಟಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಘಟನೆಯ ಕುರಿತು ರೈಲ್ವೆ ಸುರಕ್ಷತಾ ಕಮಿಷನರ್ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ನಂತರ ಘಟನೆಗೆ ನಿಖರವಾದ ಕಾರಣ ಏನು ಅನ್ನೋದು ತಿಳಿದು ಬರಲಿದೆ ಎಂದಿದ್ದಾರೆ.
ಆದರೆ ರೈಲ್ವೆ ಬೋರ್ಡ್ ಮಾತ್ರ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಸಮಸ್ಯೆಯಿಂದ ಈ ದುರಂತ ಸಂಭವಿಸಿಲ್ಲ ಎನ್ನುತ್ತಿದೆ. ರೈಲ್ವೆ ಬೋರ್ಡ್ ಸದಸ್ಯೆ ಜಯ ಶರ್ಮಾ ಅವರು ಮಾಧ್ಯಮಗಳಿಗೆ ನೀಡಿರು ಹೇಳಿಕೆಯಲ್ಲಿ ಈ ದುರಂತಕ್ಕೆ ಸಿಗ್ನಲ್ ಸಮಸ್ಯೆ ಎಂದಿದ್ದಾರೆ. ರೈಲ್ವೆ ಸಚಿವರು ಹಾಗೂ ರೈಲ್ವೆ ಬೋರ್ಡ್ ನೀಡಿರುವ ಹೇಳಿಕೆಗಳು ಗೊಂದಲವನ್ನು ಮೂಡಿಸಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಘಂಟೆಗೆ 198 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಬಾಲಸೋರ್ ರೈಲ್ವೆ ನಿಲ್ದಾಣದ ಬಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ವೇಗವಾಗಿ ಬಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದಿದೆ. ಇದೇ ವೇಳೆಯಲ್ಲಿ ಔರಾಕ್ಕೆ ತೆರಳುತ್ತಿದ್ದ ಬೆಂಗಳೂರು ಔರಾ ಎಕ್ಸ್‌ಪ್ರೆಸ್ ರೈಲು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಿಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಒಂದೊಮ್ಮೆ ರೈಲ್ವೆ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರೆ, ಔರಾ ಎಕ್ಸ್‌ಪ್ರೆಸ್ ಹಾಗೂ ಕೋರಮಂಡಲ್ ಎಕ್ಸ್‌ಪ್ರೆಸ್ ನಡುವೆ ನಡೆಯುತ್ತಿದ್ದ ದುರಂತವನ್ನು ತಪ್ಪಿಸಬಹುದಾಗಿತ್ತು. ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಆರೋಪ ಕೇಳಿಬರುತ್ತಿದೆ ಒಟ್ಟಿನಲ್ಲಿ ತನಿಖೆಯ ನಂತರವಷ್ಟೇ ದುರಂತಕ್ಕೆ ಕಾರಣವೇನು ? ಈ ದುರಂತ ಯಾವ ಕಾರಣಕ್ಕೆ ನಡೆದಿದೆ ಅನ್ನೋದು ತಿಳಿದು ಬರಬೇಕಾಗಿದೆ.
ಇದನ್ನೂ ಓದಿ : Double murder Case : 10 ವರ್ಷಗಳ ಹಿಂದಿನ ಜೋಡಿ ಕೊಲೆ ಪ್ರಕರಣ : 35 ಮಂದಿಗೆ ಜೀವಾವಧಿ ಶಿಕ್ಷೆ
ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ
ಬಾಲಸೋರ್ ದುರಂತಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಒಡಿಶಾ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರ ಕೂಡ ಅಗತ್ಯ ನೆರವು ನೀಡುತ್ತಿದೆ. ದುರಂತ ನಡೆದ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಹಾಗೂ ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇನ್ನು ಒಡಿಶಾದಿಂದ ಕೋಲ್ಕತ್ತಾಕ್ಕೆ ತೆರಳುವ ಪ್ರಯಾಣಿಕರಿಗಾಗಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣ ಮಾಡಿದ್ದಾರೆ.
Odisha train accident: signal problem or electronic interlocking problem? The cause of the Balsore railway disaster is a mystery