ಮಧ್ಯ ಪ್ರದೇಶ : sacrifice in-devi temple : ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಗಂಡು ಹಾಗೂ ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡುವ ಕುಟುಂಬಗಳು ಇನ್ನೂ ಈ ಸಮಾಜದಲ್ಲಿವೆ. ಮನೆಯಲ್ಲಿ ಒಂದು ಗಂಡು ಮಗು ಜನಿಸಬೇಕೆಂದು ಏನೆಲ್ಲ ಸಾಹಸ ಮಾಡೋರು ಇರ್ತಾರೆ . ಇದಕ್ಕಾಗಿ ಎಂತೆಂತದ್ದೋ ದುರಂತಗಳು ನಡೆದಿರುವ ಉದಾಹರಣೆ ಕೂಡ ಇದೆ. ಈ ಎಲ್ಲಾ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದೆ.
ರೇವಾ ಜಿಲ್ಲೆಯ ಬೇಧೋವಾ ಗ್ರಾಮದಲ್ಲಿ ಗಂಡು ಮಗು ಜನಿಸಿದ ಕಾರಣಕ್ಕೆ ನರಬಲಿಯೇ ನಡೆದು ಹೋಗಿದೆ. ಇದೇ ಗ್ರಾಮಕ್ಕೆ ಸೇರಿದ ರಾಮ್ಲಾಲ್ ಎಂಬಾತ ತನಗೊಂದು ಗಂಡು ಮಗು ಬೇಕೆಂದು ಬಯಸಿದ್ದ. ಆದರೆ ಈತನಿಗೆ ಮೂರು ಹೆಣ್ಣು ಮಕ್ಕಳು ಜನಿಸಿದ್ದವು. ನಾಲ್ಕನೇ ಬಾರಿಗೆ ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಈತ ಈ ಬಾರಿ ತನಗೆ ಗಂಡು ಮಗು ಜನಿಸಿದರೆ ನಿನಗೆ ನರಬಲಿ ನೀಡುತ್ತೇನೆಂದು ಗ್ರಾಮದ ದೇವಿಯ ದೇಗುಲದಲ್ಲಿ ಹರಕೆ ಕಟ್ಟಿಕೊಂಡಿದ್ದ.
ಅದರಂತೆ ಆತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ದೇವಿಯ ಕೃಪೆಯಿಂದಲೇ ತನಗೆ ಗಂಡು ಮಗು ಜನಿಸಿದೆ ಎಂದು ನಂಬಿದ ರಾಮಲಾಲ್ ಕೊಟ್ಟ ಮಾತಿನಂತೆ ದೇವಿಗೆ ನರ ಬಲಿ ನೀಡುವ ಬಗ್ಗೆ ಯೋಚಿಸುತ್ತಿದ್ದ . ಅದರಂತೆ ಈತನಿಗೆ ದಿವ್ಯಾಂಶು ಎಂಬ 18 ವರ್ಷದ ಕುರಿಗಾಹಿ ಕಣ್ಣಿಗೆ ಕಾಣಿಸಿದ್ದ.
ಜುಲೈ ಆರರಂದು ದಿವ್ಯಾಂಶು ಭೇಟಿಯಾದ ರಾಮ್ಲಾಲ್ ನನಗೆ ಕೆಲವು ವಿಚಾರಗಳಲ್ಲಿ ಸಹಾಯ ಬೇಕೆಂದು ಹೇಳಿ ದಿವ್ಯಾಂಶುಗೆ ದೇವಸ್ಥಾನಕ್ಕೆ ಬರುವಂತೆ ಕೇಳಿದ್ದಾನೆ.ಇದನ್ನು ನಂಬಿದ ದಿವ್ಯಾಂಶು ದೇಗುಲಕ್ಕೆ ತೆರಳಿದ್ದಾನೆ. ಇಲ್ಲಿ ಕೊಡಲಿ ಹಿಡಿದು ಕಾಯುತ್ತಿದ್ದ ರಾಮ್ಲಾಲ್ ಈತನನ್ನು ಕೊಚ್ಚಿ ಕೊಲೆ ಮಾಡಿ ಶವವನ್ನು ದೇವಿ ಮೂರ್ತಿಯ ಕೆಳಗಡೆ ಹೂತು ತೆರಳಿದ್ದ. ಕೆಲವು ದಿನಗಳ ಬಳಿಕ ಶವ ಹೊರಬಂದಿದ್ದು ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ರಾಮ್ಲಾಲ್ ಕೃತ್ಯ ಬೆಳಕಿಗೆ ಬಂದಿದೆ. ರಾಮ್ಲಾಲ್ನನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದಾನೆ .
ಇದನ್ನು ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !
ಇದನ್ನೂ ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್
person surrounded by superstition after fulfilling his vow to a son offered a male sacrifice in-devi temple