ಮಂಗಳೂರು : Praveen Nettaru murder case: ಬಿಜೆಪಿ ಯುವ ಮುಖಂಡ, ಭಜರಂಗದಳದ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಜಿಲ್ಲೆಯ ಬಿಜೆಪಿ ಯುವ ಮೋರ್ಛಾದ ಮುಖಂಡ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಸುಳ್ಯ ತಾಲೂಕು ಬೆಳ್ಳಾರೆ ಮೂಲದ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತ ಪ್ರವೀಣ್ ನೆಟ್ಟಾರು ಮೃತದೇಹವನ್ನು ಮೆರವಣಿಗೆಯ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಪ್ರವೀಣ್ ಸ್ವಗ್ರಾಮ ಸುಳ್ಯ ತಾಲೂಕಿನ ಬೆಳ್ಳಾರೆ ಕರೆ ತರಲಾಗಿದೆ. ಪ್ರವೀಣ್ ನೆಟ್ಟಾರು ಮನೆಯ ಸುತ್ತ ಜನಸಾಗರವೇ ಹರಿದು ಬಂದಿದೆ. ಮೆರವಣಿಗೆಯುದ್ಧಕ್ಕೂ ಪ್ರವೀಣ್ ನೆಟ್ಟಾರು ಪರ ಘೋಷಣೆಗಳು ಮೊಳಗಿದ್ದು ಮಾತ್ರವಲ್ಲದೇ ಆಂಬುಲೆನ್ಸ್ಗೆ ದಾರಿಯುದ್ಧಕ್ಕೂ ಜನತೆ ಪುಷ್ಪವನ್ನು ಅರ್ಪಿಸಿದ್ದಾರೆ. ಪತಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ನೂತನಾ ನೆಟ್ಟಾರು ಯಾವ ವೈದ್ಯರಿಂದಲೂ ನನ್ನ ಪತಿಯನ್ನು ಉಳಿಸಲು ಆಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಸಾವಿನ ವಾರ್ತೆ ಕೇಳುತ್ತಿದ್ದಂತೆಯೇ ಸಂಪೂರ್ಣ ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ನೀರವ ಮೌನ ಆವರಿಸಿದೆ.

ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ರಾತ್ರಿ ವೇಳೆ ಕೋಳಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಹೋಗಲು ಅಣಿಯಾಗುತ್ತಿದ್ದ ವೇಳೆಯಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ತಲ್ವಾರ್ನಿಂದ ಪ್ರವೀಣ್ರ ಕುತ್ತಿಗೆಗೆ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರುರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.
ಇದನ್ನು ಓದಿ : Praveen Nettar Murder : ಪ್ರವೀಣ್ ಹತ್ಯೆ : ಸಿಎಂ ಬೊಮ್ಮಾಯಿ, ನಳಿನ್ ವಿರುದ್ದ ಹಿಂದೂ ಕಾರ್ಯಕರ್ತರ ಆಕ್ರೋಶ
ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ
Praveen Nettaru murder case: Five suspects arrested