ಮಂಗಳೂರು : Praveen’s family thanked the police : ಪ್ರವೀಣ್ ನೆಟ್ಟಾರು ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ದಕ್ಷಿಣ ಕನ್ನಡ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹಂತಕರಾದ ಬಶೀರ್, ರಿಯಾಜ್ ಹಾಗೂ ಶಿಯಾಬ್ರನ್ನು ಕೇರಳದಲ್ಲಿ ಇಂದು ಬೆಳಗ್ಗೆ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಎಡಿಜಿಪಿ ಅಲೋಕ್ ಕುಮಾರ್ ಕೊಲೆ ಕೃತ್ಯದ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡಿದ್ದಾರೆ.
ಬಂಧಿತ ಮೂವರೂ ಸುಳ್ಯ ತಾಲೂಕಿನ ನಿವಾಸಿಗಳೇ ಆಗಿದ್ದು ಪ್ರವೀಣ್ ನೆಟ್ಟಾರುವನ್ನು ಕೊಲೆ ಮಾಡುವಂತಹ ದ್ವೇಷ ಏನಿತ್ತು ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಮೇಲ್ನೋಟಕ್ಕೆ ಮೂವರು ಪಿಎಫ್ಐ ಹಾಗೂ ಎಸ್ಡಿಪಿಐ ಜೊತೆಯಲ್ಲಿ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎನ್ನಲಾಗಿದ್ದು ಕೆಲವು ದಿನಗಳ ಹಿಂದೆ ಬೆಳ್ಳಾರೆಯಲ್ಲಿ ಮೃತನಾದ ಮಸೂದ್ ಎಂಬಾತನ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ.
ಹಂತಕರಾದ ರಿಯಾಜ್, ಬಶೀರ್ ಹಾಗೂ ಶಿಯಾಬ್ನನ್ನು ಇಂದು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿದ್ದು ಸ್ಥಳ ಮಹಜರು ಕಾರ್ಯ ನಡೆಸಲಾಗಿದೆ. ಹತ್ಯೆ ನಡೆದಂತಹ ಬೆಳ್ಳಾರೆ ಪರಿಸರದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಬಿಗಿ ಭದ್ರತೆಯೊಂದಿಗೆ ಡಿವೈಎಸ್ಪಿ ಗಾನ ಪಿ ಕುಮಾರಿ ನೇತೃತ್ವದಲ್ಲಿ ಸ್ಥಳ ಮಹಜರು ಕಾರ್ಯ ನಡೆಸಲಾಗಿದೆ. ಪ್ರವೀಣ್ ಕೋಳಿ ಅಂಗಡಿ ಎದುರು ಆರೋಪಿಗಳನ್ನು ಕರೆತಂದ ಪೊಲೀಸರು ಆರೋಪಿಗಳು ಪ್ರವೀಣ್ಗಾಗಿ ಕಾದು ಕುಳಿತ ಜಾಗ ಹಾಗೂ ಹತ್ಯೆ ಮಾಡಿದ ಜಾಗಗಳ ಮಹಜರು ಕಾರ್ಯ ನಡೆಸಿದ್ದಾರೆ.
ಇತ್ತ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಕಾರಣರಾದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಪ್ರವೀಣ್ ಕುಟುಂಬ ಧನ್ಯವಾದ ಸಲ್ಲಿಸಿದೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬೇಡಿ. ಯಾವ ವಕೀಲನೂ ಆರೋಪಿಗಳ ಪರವಾಗಿ ವಕಾಲಾತು ವಹಿಸಬಾರದು ಎಂದು ಮೃತ ಪ್ರವೀಣ್ ತಾಯಿ ಮನವಿ ಮಾಡಿದ್ದಾರೆ.
ಇದನ್ನು ಓದಿ : 2nd PUC Supplementary Examination : ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ
ಇದನ್ನೂ ಓದಿ : masks have been made mandatory : ಕೊರೊನಾ ಆತಂಕ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
Praveen’s family thanked the police department for arresting the accused of Praveen Nettaru’s murder