ಹೈದ್ರಾಬಾದ್ : ಆನ್‌ಲೈನ್ ತರಗತಿ ತೆಗೆದುಕೊಳ್ಳುತ್ತಿದ್ದ ಅಪ್ತಾಪ್ತ ವಿದ್ಯಾರ್ಥಿನಿಯೋರ್ವಳ ಮೇಲೆ ಶಿಕ್ಷಕನೋರ್ವ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಶಿಕ್ಷಕ ಮಹೇಶ್ ಎಂಬವನೇ ದುಷ್ಕೃತ್ಯವನ್ನು ಎಸಗಿದವನು. ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಹದಿನಾಲ್ಕು ವರ್ಷದ ಅಪ್ತಾಪ್ತ ವಿದ್ಯಾರ್ಥಿನಿಯೋರ್ವಳು ಆನ್‌ಲೈನ್ ಪಾಠಕ್ಕಾಗಿ ಶಿಕ್ಷಕರ ಹುಡುಕಾಟ ನಡೆಸುತ್ತಿದ್ದಳು. ಈ ವೇಳೆಯಲ್ಲಿ ಶಿಕ್ಷಕ ಮಹೇಶ್ ಪರಿಚಯವಾಗಿದ್ದ. ಆನ್‌ಲೈನ್ ತರಗತಿ ಮುಗಿದ ನಂತರದ ದಿನವೂ ಇಬ್ಬರೂ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದರು.
ಇದನ್ನೂ ಓದಿ : ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ : ಬಲವಂತವಾಗಿ ವಿಷ ಕುಡಿಸಿ ಕೊಲೆಗೈದ ಕಾಮುಕರು
ಅಷ್ಟೇ ಅಲ್ಲದೇ ಇಬ್ಬರೂ ಹೊರ ಭಾಗದಲ್ಲಿ ಭೇಟಿಯಾಗುತ್ತಿದ್ದರು. ನಂತರದಲ್ಲಿ ಇಬ್ಬರೂ ಹೈದ್ರಾಬಾದ್‌ಗೆ ಓಡಿ ಹೋಗಿದ್ದಾರೆ. ಬಾಲಕಿಯನ್ನು ಮಹೇಶ್ ಹೋಟೆಲ್‌ವೊಂದರಲ್ಲಿ ಇರಿಸಿದ್ದ, ಹೊರಗಡೆಯೇ ಇರುತ್ತಿದ್ದ ಮಹೇಶ್ ದಿನಕ್ಕೊಮ್ಮೆ ಬಂದು ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಬಾಲಕಿ ಮದುವೆಯ ವಿಚಾರ ಪ್ರಸ್ತಾಪ ಮಾಡುತ್ತಲೇ ತಾನು ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿರೋದಾಗಿ ತಿಳಿಸಿದ್ದಾನೆ. ನಂತರ ಬಾಲಕಿ ಹೋಟೆಲ್‌ನಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾಳೆ.
ನಂತರ ಪೋಷಕರ ಸಹಕಾರದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಹೇಶ್ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕ ಮಹೇಶ್ ಈಗಾಗಲೇ ಹಲವು ಅಪ್ತಾಪ್ತ ವಿದ್ಯಾರ್ಥಿನಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದ ಅನ್ನೋ ಮಾಹಿತಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.