ಕಲಬುರಗಿ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ(psi exam scam) ದಿನಕ್ಕೊಂದು ಆರೋಪಿಗಳು ಸಿಐಡಿ ಬಲೆಗೆ ಬೀಳುತ್ತಲೇ ಇದ್ದಾರೆ. ಪ್ರಕರಣದ ಆಳದಲ್ಲಿ ತನಿಖೆಯನ್ನು ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಒಬ್ಬೊಬ್ಬರನ್ನೇ ಖೆಡ್ಡಾಗೆ ಕೆಡವುತ್ತಿದ್ದಾರೆ. ಈ ಎಲ್ಲದರ ನಡುವೆ ಕಳೆದ 21 ದಿನಗಳಿಂದ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸಿದ್ದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಧ್ಯಾಯ ಕಾಶಿನಾಥ್ ಇಂದು ಸಿಐಡಿ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಪಿಎಸ್ಐ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ತಿದ್ದಲು ಸಹಕಾರ ನೀಡಿದ ಆರೋಪವನ್ನು ಕಾಶಿನಾಥ್ ಎದುರಿಸುತ್ತಿದ್ದಾರೆ. ಇಂದು ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿದ ಕಾಶಿನಾಥ್ ಶರಣಾಗಿದ್ದಾರೆ.
ನಿನ್ನೆ ಕೂಡ ಇದೇ ಪ್ರಕರಣದ ಆರೋಪ ಮಂಜುನಾಥ ಮೇಳಕುಂದಿ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದರು. ಇದರ ಬೆನ್ನಲ್ಲೇ ಇದೀಗ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಕೂಡ ಮಂಜುನಾಥ್ ಮೇಳಕುಂದಿ ದಾರಿಯನ್ನೇ ಅನುಸರಿಸಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ಕಂಡು ಬೆದರಿ ಆರೋಪಿಗಳು ಒಬ್ಬೊಬ್ಬರಾಗಿಯೇ ಶರಣಾಗುತ್ತಿರುವ ಸಾಧ್ಯತೆಯಿದೆ.
ಕಾಶಿನಾಥ್ ಬಂಧನದ ಬಳಿಕ ಅಕ್ರಮ ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಈವರೆಗೆ ಬಂಧನಕ್ಕೊಳಗಾದವರ ಸಂಖ್ಯೆ 26ಕ್ಕೆ ಏರಿಕೆ ಕಂಡಂತಾಗಿದೆ. ಈಗಾಗಲೇ ಸಿಐಡಿ ಅಧಿಕಾರಿಗಳ ಎದುರು ಶರಣಾಗಿರುವ ಆರೋಪಿ ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ಹಾಗೂ ಶಾಂತಿ ಭಾಯಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ‘
ಇದನ್ನು ಓದಿ :Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ
ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
psi exam scam jnana jyothi education institute headmaster surrender to cid