ಶುಕ್ರವಾರ, ಮೇ 9, 2025
HomeCinemaವೇಶ್ಯಾವಾಟಿಕೆ ತೊಡಗಿಸಿಕೊಂಡ ಖ್ಯಾತ ನಟಿ ಹಾಗೂ ಮಾಡೆಲ್‌ ಬಂಧನ

ವೇಶ್ಯಾವಾಟಿಕೆ ತೊಡಗಿಸಿಕೊಂಡ ಖ್ಯಾತ ನಟಿ ಹಾಗೂ ಮಾಡೆಲ್‌ ಬಂಧನ

- Advertisement -

ಫುಣೆ : ಇತ್ತೀಚೆಗಷ್ಟೇ ಮುಂಬೈನಲ್ಲಿ ಖ್ಯಾತ ಕಿರುತರೆ ನಟಿಯನ್ನು ವೇಶ್ಯಾವಾಟಿಕೆ (Pune Prostitution Case)‌ ಅಪರಾಧದ ಮೇಲೆ ಬಂಧಿಸಿ ಜೈಲುವಾಸ ಅನುಭವಿಸುತ್ತಿದ್ದಾರೆ. ಸದ್ಯ ಈ ಘಟನೆ ಮರೆಯುವ ಮೊದಲೇ ಮತ್ತೊಂದು ಅಂತಹದೇ ಪ್ರಕರಣ ಬಯಲಿಗೆ ಬಂದಿದೆ. ಸ್ಟಾರ್‌ ಹೊಟೇಲ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖ್ಯಾತ ನಟಿ ಹಾಗೂ ಮಾಡೆಲ್‌ ಆಗಿರುವ ನಟಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ದಂಧೆ ನಡೆಸುತ್ತಿರುವುದನ್ನು ಖಚಿತವಾದ ಮೇಲೆ ಪುಣೆ ವಾಕಡ್‌ ಏರಿಯಾದ ಫೈವ್‌ ಸ್ಟಾರ್‌ ಹೋಟೆಲ್‌ ಮೇಲೆ ದಾಳಿ ನಡೆಸಿದ ಪೊಲೀಸರು ಖ್ಯಾತ ಭೋಜ್‌ಪುರಿ ನಟಿ ಮತ್ತು ಮಾಡೆಲ್‌ ಏಜೆಂಟ್‌ನನ್ನು ವಶಪಡಿಸಿಕೊಂಡಿದ್ದಾರೆ. ನಿನ್ನೆ (ಮೇ 13) ಸಂಜೆ ನಟಿಯ ಬಂಧನವಾಗಿದ್ದು, ಪಿಂಪ್ರಿ ಚಿಂಚವಾಡ್‌ ಕ್ರೈಂ ಬ್ರ್ಯಾಂಚ್‌ ತಂಡ ಈ ಕಾರ್ಯಚರಣೆ ನಡೆಸಿದೆ.

ಇದನ್ನೂ ಓದಿ : ಮೆಕ್‌ ಡೊನಾಲ್ಡ್ಸ್‌ ಬ್ರಾಂಡ್‌ಗೆ ರಾಯಭಾರಿಯಾದ ಜೂ. ಎನ್‌ಟಿಆರ್‌ : ಸಂಭಾವನೆ ಎಷ್ಟು ಗೊತ್ತೆ ?

ಇದನ್ನೂ ಓದಿ : ನಿಷೇಧ ನಡುವಲ್ಲೂ 100 ಕೋಟಿ ರೂ ಭರ್ಜರಿ ಕಲೆಕ್ಷನ್ಸ್ ದಾಖಲಿಸಿದ ದಿ ಕೇರಳ ಸ್ಟೋರಿ

ವೇಶ್ಯಾವಾಟಿಕೆ ದಂಧೆಯಿಂದ ನಟಿ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನದವರೆಗೆ 15 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಅಮಾಯಕ ಮಹಿಳೆಯರಿಗೆ ಇಲ್ಲದ ಆಸೆ ಹುಟ್ಟಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಸದ್ಯ ಪೊಲೀಸ್‌ ಅಧಿಕಾರಿಗಳು ಹೋಟೆಲ್‌ಗೆ ದಾಳಿ ನಡೆಸಿದಾಗ ಖ್ಯಾತ ನಟಿ ಹಾಗೂ ಇಬ್ಬರು ದಂಧೆಯಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ಹೇಳಿದರು.

Actress Aarti Arrest : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್

ಮುಂಬೈ : (Actress Aarti Arrest) ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಆರತಿ ಹರೀಶ್‌ ಚಂದ್ರ ಮಿತ್ತಲ್‌ ಅವರನ್ನು ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಬಾಲಿವುಡ್‌ ನಲ್ಲಿ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿಯೂ, ನಟಿಯಾಗಿಯೂ ಕೆಲಸ ಮಾಡುತ್ತಿದ್ದ ಆರತಿ ಮಾಡೆಲ್‌ ಗಳನ್ನು ಬಳಸಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದಾರೆ ಎನ್ನುವುದಾಗಿ ಪೊಲೀಸರು ಹೇಳಿದ್ದಾರೆ.

​ನಟಿ ಆರತಿ ಹರೀಶ್‌ ಚಂದ್ರ ಮಿತ್ತಲ್‌ ಮುಂಬೈ ನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ ಪೊಲೀಸ್‌ ಅಧಿಕಾರಿ ಮನೋಜ್‌ ಸುತಾರ್‌ ಎನ್ನುವವರು ಆರತಿ ಅವರ ಬಳಿಗೆ ಗ್ರಾಹಕರ ರೀತಿಯಲ್ಲಿ ತೆರಳಿದ್ದರು. ಇಬ್ಬರು ಹುಡುಗಿಯರು ಬೇಕು, ಅವರನ್ನು ಹೋಟೆಲ್‌ ಗೆ ಕಳುಹಿಸುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆರತಿ ಅರವತ್ತು ಸಾವಿರ ರೂ ನೀಡುವಂತೆ ಬೇಡಿಕೆ ಇಟ್ಟಿದ್ದು, ಪೊಲೀಸ್‌ ಅಧಿಕಾರಿ ಮನೋಜ್‌ ಇದಕ್ಕೆ ಒಪ್ಪಿದ್ದಾರೆ.

ಹೋಟೆಲ್ ರೂಂ ಒಳಗೆ ತೆರಳುವುದಕ್ಕೂ ಮುನ್ನ ತನ್ನ ಗ್ರಾಹಕರಿಗೆ ಆರತಿ ಕಾಂಡೋಂಮ್ ನೀಡಿದ್ದರು. ಇದೆಲ್ಲವನ್ನೂ ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಗ್ರಾಹಕರ ಬಳಿ ತೆಗೆದುಕೊಳ್ಳುತ್ತಿದ್ದ ಹಣದಲ್ಲಿ ಪ್ರತಿ ಮಾಡೆಲ್​ಗೆ 15 ಸಾವಿರ ರೂಪಾಯಿ ಹಣವನ್ನು ಆರತಿ ನೀಡುತ್ತಿದ್ದರು. ಉಳಿದ ಹಣವನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಇನ್ನೂ ಈ ಕಾರ್ಯಾಚರಣೆಯ ವೇಳೆ ಇಬ್ಬರು ಮಾಡೆಲ್‌ ಗಳು ಕೂಡ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ಮಾಡೆಲ್​​ಗಳಿಗೆ ಆರತಿ ಅವರು ಭರ್ಜರಿಯಾಗಿ ಹಣ ನೀಡುತ್ತಿದ್ದರು. ಹಣದ ಆಸೆಗೆ ಅವರು ಗ್ರಾಹಕರ ಬಳಿ ತೆರಳುತ್ತಿದ್ದರು.

ನಟಿ ಆರತಿ ಬಾಲಿವುಡ್‌ ನ ಅಪ್ನಾಪನ್’ ಸೇರಿ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಆರ್​ ಮಾಧವನ್ ಜೊತೆ ಬಣ್ಣ ಹಚ್ಚುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಇದೀಗ ಅವರ ಈ ದಂಧೆಯ ಸುದ್ದಿ ಬಾಲಿವುಡ್‌ ನಲ್ಲಿ ಸಂಚಲನವನ್ನೇ ಮೂಡಿಸಿದೆ.

Pune Prostitution Case: Famous actress and model arrested for prostitution

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular