ಸೋಮವಾರ, ಏಪ್ರಿಲ್ 28, 2025
HomeCrimeRajasthan Crime News‌ : ಪತ್ನಿಯ ಪ್ರಿಯಕರನನ್ನು ಕೊಂದು 6 ಭಾಗಗಳಾಗಿ ಕತ್ತರಿಸಿದ ಪತಿರಾಯ

Rajasthan Crime News‌ : ಪತ್ನಿಯ ಪ್ರಿಯಕರನನ್ನು ಕೊಂದು 6 ಭಾಗಗಳಾಗಿ ಕತ್ತರಿಸಿದ ಪತಿರಾಯ

- Advertisement -

ರಾಜಸ್ಥಾನ : ವ್ಯಕ್ತಿಯೊರ್ವ ತನ್ನ ಪತ್ನಿಯ ಪ್ರಿಯಕರನನ್ನು (Rajasthan Crime News‌) ಕೊಂದು 6 ಭಾಗಗಳಾಗಿ ಕತ್ತರಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸದಂತೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮದನ್ ಮೇಘವಾಲ್ (35) ಎಂದು ಗುರುತಿಸಲಾಗಿದ್ದು, ಜೋಗೆಂದರ್ ಮೇಘವಾಲ್ (34) ನನ್ನು ಆತನ ತಲೆಗೆ ಕೊಡಲಿಯಿಂದ ಹೊಡೆದು ನಂತರ ಆತನ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಲಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗಗನ್‌ದೀಪ್ ಸಿಂಗ್ಲಾ ತಿಳಿಸಿದ್ದಾರೆ.

ಜುಲೈ 13 ರಂದು, ಠಾಕುರ್‌ದಾಸ್ ಗ್ರಾಮದ ನಿವಾಸಿ ಮಿಶ್ರಿಮಲ್ ಮೇಘವಾಲ್ ಅವರು ತಮ್ಮ ಮಗ ಜೋಗೆಂದರ್ ಕಾಣೆಯಾದ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದರು. ಕಳೆದ ಎರಡು ದಿನಗಳಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಣೆಯಾದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.ಜುಲೈ 17 ರಂದು, ಮಿಶ್ರಿಮಲ್ ಈ ಪ್ರಕರಣದಲ್ಲಿ ಮದನ್ ಭಾಗಿಯಾಗಿರುವ ಶಂಕೆಯಿಂದ ಮತ್ತೆ ಪೊಲೀಸರನ್ನು ಸಂಪರ್ಕಿಸಿದರು.

ಇದನ್ನೂ ಓದಿ : Road Accident : ಜೀಪಿಗೆ ಕಂಟೈನರ್ ಡಿಕ್ಕಿ 6 ಮಂದಿ ಸಾವು, 8 ಮಂದಿಗೆ ಗಾಯ

ಇದನ್ನೂ ಓದಿ : Bihar News‌ : ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಿಯತಮೆ

ನಂತರ ಪೊಲೀಸರು ಮದನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ಜೋಗೆಂದರ್ ಪತ್ನಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಪಾಲಿ ಎಸ್ಪಿ ತಿಳಿಸಿದ್ದಾರೆ. ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Rajasthan Crime News : Husband killed his wife’s lover and cut it into 6 parts

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular