ಸೋಮವಾರ, ಏಪ್ರಿಲ್ 28, 2025
HomeCrimeಕೋಟಾದಲ್ಲಿ ನದಿಗೆ ಉರುಳಿದ ದಿಬ್ಬಣದ ಕಾರು : ವರ ಸೇರಿ 9 ಮಂದಿ ದುರ್ಮರಣ

ಕೋಟಾದಲ್ಲಿ ನದಿಗೆ ಉರುಳಿದ ದಿಬ್ಬಣದ ಕಾರು : ವರ ಸೇರಿ 9 ಮಂದಿ ದುರ್ಮರಣ

- Advertisement -

ಕೋಟಾ : ಮದುವೆಯ ದಿಬ್ಬಣದ ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ರಾಜಸ್ಥಾನದ ಕೋಟಾ ದಲ್ಲಿ ( 9 dead Rajasthan) ನಡೆದಿದೆ. ಅಪಘಾತದಲ್ಲಿ ಮದುವೆಯ ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತಿ ದ್ದಾರೆ. ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿ ಇದುವರೆಗೆ ಒಟ್ಟು ಒಂಬತ್ತು ಮಂದಿಯ ಮೃತ ದೇಹವನ್ನು ಹೊರಗೆ ತೆಗೆಯಲಾಗಿದೆ. ಅಲ್ಲದೇ ನದಿಗೆ ಉರುಳಿರುವ ಕಾರವನ್ನು ಕ್ರೇನ್‌ ಮೂಲಕ ಹೊರ ತೆಗೆಯಲಾಗಿದೆ.

ರಾಜಸ್ಥಾನದ ಉಜ್ಜಯಿನಿಯ ಚಂಬಲ್‌ ನದಿಯ ಮಿನಿ ಸೇತುವೆಯ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ವರ ಸೇರಿ ಒಂಬತ್ತು ಮಂದಿ ಕಾರಿನಲ್ಲಿ ಉಜ್ಜಯಿನಿಗೆ ಮದುವೆಗೆ ತೆರಳುತ್ತಿದ್ದರು. ಚಂಬಲ್‌ ನದಿಯ ಮಿನಿ ಸೇತುವೆಯ ಬಳಿಗೆ ಬರುತ್ತಿದ್ದಂತೆಯೇ ಕಾರು ನದಿಗೆ ಉರುಳಿ ಬಿದ್ದಿದೆ. ಇದರಿಂದಾಗಿ ಕಾರಿನಲ್ಲಿದ್ದವರು ನೀರು ಪಾಲಾಗಿದ್ದಾರೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ರಕ್ಷಣಾ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಾಚರಣೆಯನ್ನು ನಡೆದಿದೆ.

ಕ್ರೇನ್‌ ಸಹಾಯದಿಂದ ನದಿಗೆ ಬಿದ್ದಿದ್ದ ಕಾರನ್ನು ಹೊರ ತೆಗೆಯಲಾಗಿದೆ. ಅಲ್ಲದೇ ಮೃತಪಟ್ಟಿರುವ ಎಲ್ಲಾ ಒಂಬತ್ತು ಮಂದಿಯನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಕಷ್ಟವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದಿದ್ದಾರೆ.

ಇದನ್ನೂ ಓದಿ : ತಾಯಿಯನ್ನು ಥಳಿಸಿ ಹತ್ಯೆಗೈದ ಪಾಪಿ ಮಗ : ಅನಾರೋಗ್ಯದ ನಾಟಕವಾಡಿದಾತ ಕೊನೆಗೂ ಅಂದರ್‌

ಇದನ್ನೂ ಓದಿ : 100 ರೂಪಾಯಿ ಸಾಲ ವಾಪಸ್​ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಕೊಂದ ಭೂಪ ಅರೆಸ್ಟ್​

( Groom 9 Dead as Car Enroute Ujjain Falls Into Chambal River Kota in Rajasthan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular