ರಾಜಸ್ಥಾನ : ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಬುಧವಾರ (Rajasthan Murder Case) ಸಂಭವಿಸಿದೆ. ಬಾಲಕಿಯ ಸಾವುವನ್ನು ಖಚಿತಪಡಿಸಿಕೊಳ್ಳಲು ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಬಾಲಕಿ ಮೃತ ಪಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹುಡುಗಿ ನಾಯಕ್ ಸಮುದಾಯದಕ್ಕೆ ಸೇರಿದವಳು. ಹುಡುಗಿ ಮಂಗಳವಾರ ನಾಪತ್ತೆಯಾಗಿದ್ದಾಳೆ. ನಾವು ವಿಚಾರಿಸಿದಾಗ ಆಕೆಗಾಗಿ ಚಿಪ್ಸ್ ಪ್ಯಾಕೆಟ್ ಖರೀದಿಸಿದ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ನಮಗೆ ಕಂಡು ಬಂದಿದೆ. ಇದು ಆರೋಪಿಗಳು ಬಾಲಕಿಗೆ ತಿಂಡಿ ತಿನಿಸಿನ ಆಮಿಷ ಒಡ್ಡಿ ಅಪಹರಿಸಿದ್ದಾರೆ ಎಂದು ಸೂಚಿಸುತ್ತದೆ. ಎಂದು ಪೊಲೀಸ್ ವಸಿಷ್ಠಾಧಿಕಾರಿ ಆನಂದ್ ಶರ್ಮಾ ಹೇಳಿದ್ದಾರೆ.
ಮೇಲ್ನೋಟಕ್ಕೆ ನೋಡಿದರೆ ಹುಡುಗಿಯನ್ನು ಮೊದಲು ಬಟ್ಟೆಯ ತುಂಡಿನಿಂದ ಕತ್ತು ಹಿಸುಕಲಾಗಿದೆ ಎಂದು ತೊರುತ್ತದೆ. ನಂತರ ಆರೋಪಿಗಳು ಇಟ್ಟಿಗೆ ಹೊಡೆದಿದ್ದಾರೆ. ಆಕೆಯ ಶವವನ್ನು ಅವಳ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಹೀಗಾಗಿ ಆರೋಪಿಯು ಯಾರೆಂದು ಹುಡುಗಿಗೆ ತಿಳಿದಿರಬೇಕೆಂದು ಊಹಿಸಲಾಗುತ್ತದೆ. ಆಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಯೇ ಅಥವಾ ಇಲ್ಲವೇ ಎನ್ನುವುದನ್ನು ಮೃತ ಬಾಲಕಿಯ ಶವಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಲಿದೆ ಎಂದು ಪೊಲೀಸ್ ಅಧಿಕಾರಿ ಆನಂದ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ : Complaint Against the MLA : ಮರದಿಂದ ಬಿದ್ದು ಕಾಲು ಮುರಿದುಕೊಂಡ ಮಹಿಳೆ : ಶಾಸಕರ ವಿರುದ್ದ ದೂರು ದಾಖಲು
ಇದನ್ನೂ ಓದಿ : Rape by bus driver: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ
ಇದನ್ನೂ ಓದಿ : Holiday for college: ಕನ್ನಡ ಬಾವುಟ ಹಿಡಿದಿದ್ದಕ್ಕೆ ಹಲ್ಲೆ: ಮುಂಜಾಗ್ರತಾ ಕ್ರಮವಾಗಿ ಕಾಲೇಜಿಗೆ ರಜೆ ಘೋಷಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಿಕ್ಕಿದ ಕೂಡಲೇ ಎಸ್ಪಿ ಆನಂದ್ ಶರ್ಮಾ, ಅವರ ಡೆಪ್ಯೂಟಿ ಭನ್ವರಲಾಲ್, ಠಾಣಾಧಿಕಾರಿ ತೇಜ್ವಂತ್ ಸಿಂಗ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಶ್ವಾನದಳ ಸೇರಿದಂತೆ ಹಲವು ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಬಾಲಕಿಯ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು ಆಕೆ ಒಬ್ಬಳೇ ಇದ್ದಾಗ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ. ಅಕ್ಕಪಕ್ಕದ ಮನೆಯವರು ಹುಡುಗಿಗಾಗಿ ಸಾಕಷ್ಟು ಬಾರಿ ಹುಡುಕಿದರೂ ಶವ ಪತ್ತೆ ಆಗದೇ ಇದ್ದಾಗ, ಪೊಲೀಸರಿಗೆ ಮಾಹಿತಿ ನೀಡಿದ್ದಾಗ ಶವ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವುದಾಗಿ ಎಸ್ಪಿ ಆನಂದ್ ಶರ್ಮಾ ಹೇಳಿದ್ದಾರೆ.
Rajasthan Murder Case: The girl was beaten with a brick and suspected of rape