ಭಾನುವಾರ, ಏಪ್ರಿಲ್ 27, 2025
HomeCrimeRape and Murder Case :‌ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ ಮರಣದಂಡನೆ

Rape and Murder Case :‌ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ ಮರಣದಂಡನೆ

- Advertisement -

ಉತ್ತರ ಪ್ರದೇಶ : ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ 35 ವರ್ಷದ ವ್ಯಕ್ತಿಗೆ ಮರಣದಂಡನೆ (Rape and Murder Case) ವಿಧಿಸಲಾಗಿದೆ. ನ್ಯಾಯಲಯವು ಈ ಪ್ರಕರಣವನ್ನು ಅಪರೂಪದ ಅಪರೂಪ ಎಂದು ಹೇಳಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಜಹಗೀರಾಬಾದ್ ಪ್ರದೇಶದಲ್ಲಿ ಈ ಪ್ರಕರನ ನಡೆದಿದೆ. ಶಿಕ್ಷೆಯ ಪ್ರಮಾಣವನ್ನು ಮೀರತ್‌ನ ವಿಶೇಷ ಫೋಕ್ಸೋ ನ್ಯಾಯಾಲಯವು ಘೋಷಿಸಿತು. ಈ ಪ್ರಕರಣವನ್ನು “ಅಪರೂಪದ ಅಪರೂಪ” ಎಂದು ಬಣ್ಣಿಸಿದೆ. ಆರೋಪಿಯನ್ನು ಮೊಹಮ್ಮದ್ ಫಹೀಂ ಎಂದು ಗುರುತಿಸಲಾಗಿದೆ.

“ಇಂತಹ ಅಪರಾಧವು ಕಾನೂನು, ಮಾನವ ಮತ್ತು ಸಾಮಾಜಿಕ ಸಂಬಂಧಗಳ ಉಲ್ಲಂಘನೆ ಮಾತ್ರವಲ್ಲದೆ, ಸಾಮಾಜಿಕ ರಚನೆಯನ್ನು ನಾಶಪಡಿಸುತ್ತದೆ. ಅಂತಹ ಅಪರಾಧ ಮಾಡುವ ವ್ಯಕ್ತಿಯು ಗರಿಷ್ಠ ಶಿಕ್ಷೆಗೆ ಅರ್ಹನಾಗಿರುತ್ತಾನೆ,” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ನ್ಯಾಯಾಲಯವು ಆರೋಪಿಗೆ 1.2 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ಅದನ್ನು ಸಂತ್ರಸ್ತೆಯ ಕುಟುಂಬಕ್ಕೆ ಪಾವತಿಸಲಾಗುವುದು. ವರದಿಗಳ ಪ್ರಕಾರ, ಈ ವರ್ಷದ ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದೆ.

ನ್ಯಾಯಾಲಯದ ಆದೇಶ :
“ಐಪಿಸಿ ಸೆಕ್ಷನ್ 302 ಮತ್ತು ಪೋಕ್ಸೋ ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ 1 ಲಕ್ಷ ರೂ ದಂಡದೊಂದಿಗೆ ಆರೋಪಿಯನ್ನು ಮರಣದ ತನಕ ಗಲ್ಲಿಗೇರಿಸಲು ವಿಶೇಷ ನ್ಯಾಯಾಧೀಶ (ಪೋಕ್ಸೊ) ಧ್ರುವ ರೈ ಆದೇಶಿಸಿದ್ದಾರೆ. ಐಪಿಸಿ 201 ರ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ರೂ 20,000 ದಂಡ,” ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಭರತ್ ಶರ್ಮಾ ಹೇಳಿದರು.

ಅಪರೂಪದ ಅಪರೂಪ ಪ್ರಕರಣದ ಹಿನ್ನಲೆ :
ಅಪ್ರಾಪ್ತ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆರೋಪಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಎಸ್‌ಎಸ್‌ಪಿ ಬುಲಂದ್‌ಶಹರ್ ಶ್ಲೋಕ್ ಕುಮಾರ್ ತಿಳಿಸಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಮನೆಯಿಂದ ನಾಪತ್ತೆಯಾದಾಗ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಕ್ಕಪಕ್ಕದವರು ತಮ್ಮ ನೆರೆಹೊರೆಯಲ್ಲಿ ವಾಸಿಸುವ ಫಹೀಮ್‌ನೊಂದಿಗೆ ಬಾಲಕಿಯನ್ನು ನೋಡಿದ್ದಾರೆ ಎಂದು ಅವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Soujanya Case : ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ : ಮರುತನಿಖೆಗೆ ಸಿಎಂ ಭೇಟಿಯಾದ ಪೋಷಕರು, ಜು.28ಕ್ಕೆ ಬೆಂಗಳೂರಲ್ಲಿ ಬೃಹತ್​​ ಧರಣಿ

ಇದನ್ನೂ ಓದಿ : Toilet video case : ಉಡುಪಿ : ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ : 3 ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲು

ಸಂಜೆ ನಂತರ ಬಾಲಕಿಯ ಶವವನ್ನು ಫಹೀಮ್‌ನ ಮನೆಯಿಂದ ಹೊರತೆಗೆಯಲಾಯಿತು. ಅವರು ಶವವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದರು. ಪೊಲೀಸರ ಪ್ರಕಾರ, ಅದೇ ರಾತ್ರಿ ಆರೋಪಿಯನ್ನು ಬಂಧಿಸಲಾಯಿತು ಮತ್ತು ಶವಪರೀಕ್ಷೆ ವರದಿಯು ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದೆ ಎಂದು ದೃಢಪಡಿಸಿತು. ಆರೋಪಿಯನ್ನು ಏಪ್ರಿಲ್‌ನಲ್ಲಿ ಬಂಧಿಸಿದಾಗಿನಿಂದ ಜೈಲಿನಲ್ಲಿ ಇರಿಸಲಾಗಿದೆ.

Rape and Murder Case: Rape of a minor girl: Accused sentenced to death

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular