ಹತ್ರಾಸ್ ಕೇಸ್ ಸದ್ಯದ ಮಟ್ಟಿಗೆ ದೇಶವನ್ನೆಲ್ಲಾ ಬೆಚ್ಚಿ ಬೀಳಿಸಿರುವ ಘಟನೆ. ಆದರೆ ಇಂತಹ ಘಟನೆ ನಡೆದಿರೋದು ದೇಶದಲ್ಲಿ ಮೊದಲಲ್ಲ. ನಿರ್ಭಯ, ಸೌಜನ್ಯ ಹೀಗೆ ಹಲವು ಅಮಾಯಕರು ಅತ್ಯಾಚಾರದ ಕೌರ್ಯಕ್ಕೆ ಬಲಿಯಾಗಿದ್ದಾರೆ. ಕೆಲವರ ಕುಟುಂಬ ನ್ಯಾಯಕ್ಕಾಗಿ ಓಡಾಡುತ್ತಾನೇ ಇದ್ದಾರೆ. ಈ ನೀಚ ಕೃತ್ಯ ಎಲ್ಲಿ ಮುಟ್ಟಿದೆ ಅಂದ್ರೆ ಚಿಕ್ಕ ಮಕ್ಕಳನ್ನು ಬಿಟ್ಟಿಲ್ಲ.

ಪುಟ್ಟ ಪುಟ್ಟ ಮಕ್ಕಳು ನೀಚ ಕಾಮುಕ ಕೈಯಲ್ಲಿ ನರಳಾಡುತ್ತಾನೇ ಇದ್ದಾರೆ . ಇದನ್ನು ತಡೀಬೇಕು ಅಂತ ಎಲ್ಲರೂ ಹೋರಾಟ ನಡೆಸಿದ್ರು ಇಂತಹ ಘಟನೆಗೆ ಕಡಿವಾಣ ಬಿದ್ದಿಲ್ಲ. ಇದು ನಮ್ಮ ದೇಶದ ಮಾತ್ರ ಗೋಳಲ್ಲ ಹಲವು ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡಿಯುತ್ತಿವೆ. ಕೆಲವು ರಾಷ್ಟ್ರಗಳಲ್ಲಿ ಇಂತಹ ಕೃತ್ಯಗಳಿಗೆ ಕಠಿಣ ಕಾನೂನು ಇದೆ. ಇಂಹತ ಕೃತ್ಯಕ್ಕೆ ನಿಜಕ್ಕೂ ಕಠಿಣ ಶಿಕ್ಷೆಯಾಗಬೇಕು . ಆಗ ಮಾತ್ರ ಕಾಮುಕರಿಗೆ ಸ್ವಲ್ಪ ಆದ್ರೂ ಭಯ ಆನ್ನೋದು ಹುಟ್ಟಬಹುದು.

ಇಂತಹದೇ ಒಂದು ಶಿಕ್ಷೆಯನ್ನು ನ್ಯಾಯಾಲಯವೊಂದು ನೀಡಿದೆ. ಅದೇನು ಗೊತ್ತಾ ? 600 ವರ್ಷಗಳ ಜೈಲುವಾಸ. ಆತ ಪುಟ್ಟ ಮಕ್ಕಳ ನ್ನು ಕಾಮಕೃತ್ಯಕ್ಕಾಗಿ ಬಳಸಿದ್ದ ನೀಚ. ಈತನ ಹೆಸರು ಮ್ಯಾಥ್ಯೂ ಟೈಲರ್ ಮಿಲ್ಲರ್ . ಈತ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಬ್ಬರ ಮೇಲೆ ಹಲವು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದ. 2014 ರಿಂದ 2019 ವರೆಗೆ ಈತ ಈ ಮಕ್ಕಳ ಮೇಲೆ ದೌರ್ಜನ್ಯ ವೆಸಗಿದ್ದಾನೆ.

2019ರಲ್ಲಿ ಈತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ಇದೀಗ ಅಮೇರಿಕಾದ ಕೋರ್ಟ್ ಈತನಿಗೆ 600 ವರ್ಷಗಳ ಸಜೆ ನೀಡಿದೆ. ಇನ್ನು 600 ವರ್ಷಗಳ ಸಜೆ ಬಗ್ಗೆ ಸಮರ್ಥಿಸಿರೋ ಕೋರ್ಟ್ ಇದು ಕೇವಲ ದೌರ್ಜನ್ಯ ಮಾತ್ರವಲ್ಲ. ಆತ ಆ ಮಕ್ಕಳ ಬಾಲ್ಯದ ಸುಖ ಸಂತೋಷ ಕಸಿದುಕೊಂಡಿದ್ದಾನೆ. ಹೀಗಾಗಿ ಜೈಲಿನಿಂದ ಹೊರ ಇರುವ ಅಧಿಕಾರವೇ ಇಲ್ಲ ಅಂತ ಹೇಳಿದೆ.

ಮಹಿಳೆಯರನ್ನು ಗೌರವವಾಗಿ ಕಂಡರೆ ಮಾತ್ರ ಅಲ್ಲಿ ದೇವರು ಇರುತ್ತಾನೆ ಅನ್ನೋ ಮಾತು ನಮ್ಮಲ್ಲಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲರ ಜವಾಬ್ದಾರಿ. ಅತ್ಯಾಚಾರಿಗಳಿಗೆ ಬದುಕುವ ಯೋಗ್ಯತೆ ಇಲ್ಲ. ಅವರನ್ನು ಶಿಕ್ಷಿಸುವ ಕಾನೂನು ಈಗಾದ್ರೂ ನಮ್ಮಲ್ಲಿ ಬರಲಿ.