ಮಂಗಳವಾರ, ಏಪ್ರಿಲ್ 29, 2025
HomeCrimeShoot and escape: ಕುರ್ಚಿಯ ವಿಚಾರಕ್ಕೆ ವಾದ: ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿ ವ್ಯಕ್ತಿ ಪರಾರಿ

Shoot and escape: ಕುರ್ಚಿಯ ವಿಚಾರಕ್ಕೆ ವಾದ: ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿ ವ್ಯಕ್ತಿ ಪರಾರಿ

- Advertisement -

ಗುರುಗ್ರಾಮ್: (Shoot and escape) ತಮ್ಮ ಕಚೇರಿಯಲ್ಲಿ ಕುರ್ಚಿ ವಿಚಾರದಲ್ಲಿ ನಡೆದ ವಾದ ವಿವಾದದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರ ಮೇಲೆ ಅವರ ಸಹೋದ್ಯೋಗಿಯೇ ಗುಂಡು ಹಾರಿಸಿದ ಘಟನೆ ಗುರುಗ್ರಾಮದ ರಮದಾ ಹೋಟೆಲ್ ಬಳಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಗುರುಗ್ರಾಮ್‌ನ ಸೆಕ್ಟರ್ 9 ರ ಫಿರೋಜ್ ಗಾಂಧಿ ಕಾಲೋನಿ ನಿವಾಸಿ ವಿಶಾಲ್ (23 ವರ್ಷ) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಚೇರಿಯಲ್ಲಿ ಕುರ್ಚಿ ವಿಚಾರವಾಗಿ ತನ್ನ ಸಹೋದ್ಯೋಗಿ ಅಮನ್ ಜಂಗ್ರಾ ಅವರೊಂದಿಗೆ ವಿಶಾಲ್ ವಾಗ್ವಾದ ನಡೆಸಿದ್ದು, ಇದೇ ವಿಚಾರವಾಗಿ ಮರುದಿನ ಮತ್ತೆ ವಾಗ್ವಾದ ನಡೆದಿದೆ. ವಾಗ್ವಾದದ ನಂತರ ಇಬ್ಬರು ಕಚೇರಿಯಿಂದ ಹೊರನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಮನ್ ಹಿಂದಿನಿಂದ ಬಂದು ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ವಿಶಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ನಂತರ ಪೊಲೀಸರೇ ವಿಶಾಲ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯ ಸಹೋದರನ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25-54-59 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಹರಿಯಾಣದ ಹಿಸಾರ್ ಮೂಲದ ಆರೋಪಿ ಅಮನ್ ಜಂಗ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

“ಆರೋಪಿಯನ್ನು ಗುರುತಿಸಲಾಗಿದೆ ಮತ್ತು ನಾವು ಅವನನ್ನು ಹಿಡಿಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಪೂರ್ವ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ಪಿಟಿಐಗೆ ತಿಳಿಸಿದ್ದಾರೆ. “ಸಂತ್ರಸ್ತೆ ಕಚೇರಿಗೆ ತೆರಳುತ್ತಿದ್ದಾಗ ಆರೋಪಿ ಆತನ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಗುರುತು ಪತ್ತೆ ಮಾಡಲು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ. ಆತನನ್ನು ಹಿಡಿಯಲು ದಾಳಿ ನಡೆಸಲಾಗುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Fire at migrant facility Centre: ಮೆಕ್ಸಿಕೋದ ವಲಸಿಗರ ಸೌಲಭ್ಯ ಕೇಂದ್ರದಲ್ಲಿ ಭಾರೀ ಬೆಂಕಿ: 39 ಮಂದಿ ಸಾವು

Shoot and escape: Argument over the chair: Man escapes after shooting colleague

RELATED ARTICLES

Most Popular