ಭಾನುವಾರ, ಏಪ್ರಿಲ್ 27, 2025
HomeCrimeSinger KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

- Advertisement -

ಕೋಲ್ಕತ್ತಾ : ನೇರ ಪ್ರದರ್ಶನದ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್ (Singer KK dies) ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಸಾವಿಗೂ ಮುನ್ನ ತನ್ನ ನೇರ ಪ್ರಸಾರದ ವಿಡಿಯೋವನ್ನು ಗಾಯಕ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಕೆಕೆ ಎಂದೇ ಜನಪ್ರಿಯವಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂಞತ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಕೋಲ್ಕತ್ತಾದ ನಜ್ರುಲ್ ಮಂಚಾ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮದ ನಂತರ 53 ವರ್ಷದ ಗಾಯಕ ಕೆ.ಕೆ. (Singer KK dies ) ಅವರು ತಂಗಿದ್ದ ಹೋಟೆಲ್‌ನಲ್ಲಿ ಕುಸಿದುಬಿದ್ದರು. ಗಾಯಕ ಮೃತಪಟ್ಟಿರುವುದನ್ನು ಸಿಎಂಆರ್‌ಐ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. 1990 ರ ದಶಕದಲ್ಲಿ ಸಖತ್‌ ಹಿಟ್‌ ಆಗಿರುವ ಪಾಲ್‌ ಮತ್ತು ಯಾರೋನ್‌ ಹಾಡುಗಳ ಮೂಲಕ ಕೆಕೆ ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದುಕೊಂಡಿದ್ದರು. ಶಾಲೆ, ಕಾಲೇಜು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಕೆಕೆ ಹಾಡುಗಳೇ ಮೊಳಗುತ್ತಿದ್ದವು.

ಕಲಾವಿದನಿಗೆ ಅವನು ಅಥವಾ ಅವಳು ವೇದಿಕೆಯಲ್ಲಿದ್ದಾಗ ಒಂದು ನಿರ್ದಿಷ್ಟ ಶಕ್ತಿ ಇರುತ್ತದೆ. ಒಬ್ಬರ ಸ್ಥಿತಿ ಏನೇ ಇರಲಿ, ಒಮ್ಮೆ ನಾನು ವೇದಿಕೆಗೆ ಬಂದರೆ, ನಾನು ಎಲ್ಲವನ್ನೂ ಮರೆತು ಸರಳವಾಗಿ ಪ್ರದರ್ಶನ ನೀಡುತ್ತೇನೆ ಎಂದು ಕೆಕೆ ತಮ್ಮ ಅಧಿಕೃತ ವೆಬ್‌ಸೈಟ್ ದಿ ಮೆಸ್ಮರೈಸರ್‌ನಲ್ಲಿ ತಮ್ಮ ಆತ್ಮಚರಿತ್ರೆಯನ್ನು ಬರೆದುಕೊಂಡಿದ್ದಾರೆ. 1999 ರ ಮೊದಲು ಕೆಕೆ ಅವರ ಆಲ್ಬಂ ಪಾಲ್ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. 2000 ರ ದಶಕದ ಆರಂಭದಿಂದಲೂ ಹಿನ್ನೆಲೆ ಗಾಯನದಲ್ಲಿ ತಮ್ಮ ವೃತ್ತಿ ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು.

ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ರಾಜಕೀಯ ನಾಯಕರು, ನಟರು ಮತ್ತು ಅಭಿಮಾನಿಗಳು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಖ್ಯಾತ ಗಾಯಕ ಕೃಷ್ಣಕುಮಾರ್ ಕುಂಞತ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರೊಂದಿಗೆ ಒಂದು ಸ್ವರಮೇಳವನ್ನು ಹೊಡೆದಂತೆ ವ್ಯಾಪಕವಾದ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : boycott laal singh chaddha : ಆಮಿರ್​ ಖಾನ್​​-ಕರೀನಾ ಕಪೂರ್​​ಗೆ ಹೊಸ ಸಂಕಷ್ಟ: ಲಾಲ್​ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ

ಇದನ್ನೂ ಓದಿ : Shraddha Das : ಬ್ಲ್ಯಾಕ್ ಸ್ಯಾರಿಯಲ್ಲಿ ಕೋಟಿಗೊಬ್ಬ-3 ಬ್ಯೂಟಿ : ಶೃದ್ಧಾ ದಾಸ್ ಪೋಟೋ ನೋಡಿ ಫ್ಯಾನ್ಸ್ ಫಿದಾ

Singer KK dies at 53 after live performance in Kolkata

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular