ಮಂಗಳವಾರ, ಏಪ್ರಿಲ್ 29, 2025
HomeCrimeSmall Child Died : ಚಾಲಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮಗುವಿನೊಂದಿಗೆ ವಾಹನದಿಂದ ಹಾರಿದ ತಾಯಿ :...

Small Child Died : ಚಾಲಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮಗುವಿನೊಂದಿಗೆ ವಾಹನದಿಂದ ಹಾರಿದ ತಾಯಿ : 10 ತಿಂಗಳ ಮಗು ಸಾವು

- Advertisement -

ಮುಂಬೈ : ಚಾಲಕನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಹದಿಹರೆಯದ ತಾಯಿಯೊಬ್ಬಳು ತನ್ನ 10 ತಿಂಗಳ ಮಗುವಿನೊಂದಿಗೆ ಚಲಿಸುತ್ತಿರುವ ವಾಹನದಿಂದ ಹಾರಿದ (Small Child Died) ದುರದೃಷ್ಟಕರ ಘಟನೆ ನಡೆದಿದೆ. ಈ ದುರ್ಘಟನೆಯಿಂದಾಗಿ ಹತ್ತು ತಿಂಗಳ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿಯ ತಲೆಗೆ ಗಂಭೀರ ಗಾಯವಾಗಿದೆ.

ಮುಂಬೈನ ವಿರಾರ್‌ನಲ್ಲಿ ತಾಯಿಯೊಬ್ಬಳು ತನ್ನ ಹತ್ತು ತಿಂಗಳ ಮಗುವಿನೊಂದಿಗೆ ಚಲಿಸುತ್ತಿರುವ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಚಾಲಕನ್ನು ಆಕೆಗೆ ಕಿರುಕುಳವನ್ನು ನೀಡಿದ್ದಾರೆ. ಸದ್ಯ ಚಾಲಕನ ವಿರುದ್ಧ ಕೊಲೆ ಮತ್ತು ಕಿರುಕುಳದ ಅಪರಾಧವಲ್ಲದೇ ನರಹತ್ಯೆಯ ಆರೋಪ ಹೊರಿಸಲಾಗಿದೆ. ಚಾಲಕನ ಹೇಳಿಕೆಯ ಪ್ರಕಾರ ಮಗು ಹೊರಕ್ಕೆ ವಾಲುತ್ತಿರುವಾಗ ತಾಯಿಯ ಕೈಯಿಂದ ಬಿದ್ದಿತು. ನಂತರ ಗಾಬರಿಯಿಂದ ಅವಳು ಕೂಡ ಹೊರಗೆ ಹಾರಿದಳು ಎನ್ನಲಾಗಿದೆ.

Small Child Died : ನಡೆದ ಘಟನೆ ವಿವರ :

ವಾಹನದಿಂದ ಹಾರಿದ ಸೋನಾಕ್ಷಿ ವಾಕ್ಡೆ ಅವರನ್ನು ಕೂಡಲೇ ನಲಾಸ್ಪೋರ್‌ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಚಾಲಕ 30 ವರ್ಷದ ವಿಜಯ್ ಕುಶ್ವಾಹಾ ತನ್ನನ್ನು ಕಿರುಕುಳ ನೀಡಲು ಪ್ರಯತ್ನಿಸಿದರು ಎಂದು ಆರೋಪಿಸಿದರು. ಆದರೆ ಸೋನಾಕ್ಷಿ ಘಟನೆಯ ಬಗ್ಗೆ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾಳೆ. ಮೊದಲು ಆಕೆ ತನ್ನನ್ನು ರಕ್ಷಿಸಿಕೊಳ್ಳಲು ವಾಹನದಿಂದ ಹಾರಿಹೋದಳು ಎಂದು ಹೇಳಿದಳು ಆದರೆ ನಂತರ ಅವಳ ಮಗು ತನ್ನ ಕೈಯಿಂದ ಜಾರಿಬಿದ್ದು, ತಾನು ಕೂಡ ಗಾಬರಿಯಿಂದ ಹೊರಗೆ ಹಾರಿದೆ ಎನ್ನುವ ದಂದ್ವದ ಹೇಳಿಕೆಯನ್ನು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : small child died: ನೀರಿನ ಬಕೆಟ್‌ ಗೆ ಬಿದ್ದು ಪ್ರಾಣ ಕಳೆದುಕೊಂಡ ಮುದ್ದು ಕಂದಮ್ಮ..!

ಇದನ್ನೂ ಓದಿ : Thawar Chand Gehlot: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

ಇದನ್ನೂ ಓದಿ : Terrible accident: ಕಾರು ಲಾರಿ ಭೀಕರ ಅಪಘಾತ :3 ಸಾವು, ಓರ್ವ ಗಂಭೀರ

ಇದನ್ನೂ ಓದಿ : Attack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ ಅರೆಸ್ಟ್

ಘಟನೆ ಸಂಭವಿಸಿದಾಗ ಸೋನಾಕ್ಷಿ ಪಾಲ್ಘರ್‌ನ ವಾಡಾದಲ್ಲಿರುವ ತನ್ನ ಪೋಷಕರ ಮನೆಗೆ ಹೋಗುತ್ತಿದ್ದರು. ಪೊಲೀಸರು ಈಗ ಹೇಳಿಕೆಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಿಸಿಟಿವಿ ದೃಶ್ಯಗಳನ್ನು ನೋಡುತ್ತಾರೆ. ಮೆನಾವೀಲ್ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Small Child Died: Mother jumps out of vehicle with child to escape driver harassment: 10-month-old child dies

RELATED ARTICLES

Most Popular