ಯಾದಗಿರಿ : ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಕರ್ನಾಟಕದಲ್ಲಿ ಮತ್ತೊಂದು ಘಟನೆ ನಡೆದಿದೆ. ಮಹಿಳೆಯೋರ್ವರನ್ನು ಕತ್ತಲ ರಾತ್ರಿಯಲ್ಲಿ ಬೆತ್ತಲೆಗೊಳಿಸಿ ಥಳಿಸಲಾಗಿದ್ದು, ಅಂಗಾಂಗಗಳನ್ನು ಮುಟ್ಟಿ ಅಮಾನವೀಯವಾಗಿ ಕಾಮುಕರು ವಿಕೃತಿ ಮೆರೆದಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ -ಶಹಾಪುರ ಮಾರ್ಗದ ಹೆದ್ದಾರಿ ಬಳಿಯ ಜಮೀನೊಂದರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಕೋರರೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.ನಾಲ್ಕೈದು ಜನರ ಗುಂಪಿನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Crime News : 9 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿದ ಶಾಲಾ ಮುಖ್ಯೋಪಾಧ್ಯಾಯ
ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಿದ್ದಲ್ಲದೇ, ಅಂಗಾಂಗಗಳನ್ನು ಮುಟ್ಟಿ ವಿಕೃತಿ ತೋರಲಾಗಿದೆ. ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ ಇದರಲ್ಲಿರುವುದು ನೀನೇ ಅಲ್ಲವೇ ಎಂದು ಕೇಳಿ ಹಲ್ಲೆ ನಡೆಸಲಾಗಿದೆ. ಈ ಪೈಶಾಚಿಕ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Crime News : ಟೆಂಪೋದೊಳಗೆ ಅತ್ಯಾಚಾರ : ಮಹಿಳೆ ಸಾವು, ಓರ್ವನ ಬಂಧನ
ಹಲ್ಲೆ ನಡೆಸಿದವರು ಯಾರು? ಹಲ್ಲೆಗೊಳಗಾದ ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ. ಇನ್ನು ಈ ಕುರಿತಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿಲ್ಲ.
(Another incident took place in Karnataka. A woman is naked and beaten in the dark of night.)