ಉತ್ತರ ಪ್ರದೇಶ: Student rape: ಮಕ್ಕಳ ಬಾಳಿಗೆ ಬೆಳಕು ತೋರಬೇಕಾದ ಶಿಕ್ಷಕರೇ ಇತ್ತೀಚೆಗೆ ಕೆಟ್ಟ ಕೆಲಸ ಮಾಡುವ ಎಷ್ಟೋ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತವೆ. ಅಂಥದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು 17 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ವಿದ್ಯಾರ್ಥಿನಿಯ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ್ದಾಗಿ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 23ರಂದು ನಡೆದ ಅತ್ಯಾಚಾರ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 23ರಂದು ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ 9 ವಿದ್ಯಾರ್ಥಿಗಳ ಜೊತೆ ವೃಂದಾವನಕ್ಕೆ ಪ್ರವಾಸ ಕೈಗೊಂಡಿದ್ದರು. ವಿದ್ಯಾರ್ಥಿನಿಯರು ರಾತ್ರಿ ತಂಗಲು 2 ಹೋಟೆಲ್ ರೂಂಗಳನ್ನು ಬುಕ್ ಮಾಡಿದ್ದರು. ಒಂದು ರೂಮಿನಲ್ಲಿ 8 ವಿದ್ಯಾರ್ಥಿನಿಯರಿಗೆ ತಂಗುವಂತೆ ಹೇಳಿ, ಮತ್ತೊಂದು ರೂಮಿನಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಜೊತೆ ಪ್ರಾಂಶುಪಾಲ ಉಳಿದುಕೊಂಡಿದ್ದರು. ಈ ವೇಳೆ ವಿದ್ಯಾರ್ಥಿನಿಗೆ ಅಮಲು ಪದಾರ್ಥ ಬೆರೆಸಿದ ಆಹಾರ ನೀಡಿ ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Bank worker murder: ಬ್ಯಾಂಕ್ ನೌಕರನ ಕತ್ತು ಕೊಯ್ದು ಬರ್ಬರ ಹತ್ಯೆ
ವಿದ್ಯಾರ್ಥಿನಿ ಪ್ರತಿರೋಧ ತೋರಿದಾಗ ಪ್ರಿನ್ಸಿಪಾಲ್ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿಯೂ ಹಾಗೂ ಕೊಲ್ಲುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಲಾಗಿದೆ. ನವೆಂಬರ್ 24ರಂದು ಪ್ರವಾಸ ಮುಗಿಸಿ ಸಂತ್ರಸ್ತ ಹುಡುಗಿ ಮನೆಗೆ ತೆರಳಿದ್ದಾಳೆ. ಮೊದಲಿಗೆ ಪ್ರಾಂಶುಪಾಲರ ಬೆದರಿಕೆಗೆ ಅಂಜಿ ಸುಮ್ಮನಿದ್ದ ಸಂತ್ರಸ್ತೆ ಕೆಲ ದಿನಗಳ ಬಳಿಕ ತನ್ನ ಪೋಷಕರಿಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ಸಂತ್ರಸ್ತೆ ತಂದೆ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Mangaluru car accident: ಆಟವಾಡುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: 7 ಮಕ್ಕಳಿಗೆ ಗಾಯ
ಇದನ್ನೂ ಓದಿ: Sadananda Serigar suicide: ಕುರುಪ್ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ : ಸದಾನಂದ ಸೇರಿಗಾರ್ ಜೈಲಿನಲ್ಲಿ ಆತ್ಮಹತ್ಯೆ
ಇಂಗ್ಲಿಷ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Student rape: Government college principal booked for raping class 11 student in Uttar Pradesh