ಕೊಪ್ಪಳ : terrorist organization ISIS: ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಜೊತೆಯಲ್ಲಿ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ಮೂಲದ ಬಾಳೆ ಹಣ್ಣಿನ ವ್ಯಾಪಾರಿಯಾಗಿರುವ ಶಬ್ಬೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ತಡರಾತ್ರಿ ಶಬ್ಬೀರ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಬ್ಬೀರ್ ಹೋಲ್ಸೇಲ್ ಹಣ್ಣಿನ ವ್ಯಾಪಾರಿಯಾಗಿದ್ದು ಗಂಗಾವತಿಯ ಬನ್ನಿಗಿಡ ಕ್ಯಾಂಪ್ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ,
ಬಾಳೆ ಹಣ್ಣಿನ ವ್ಯಾಪಾರವನ್ನು ಮಾಡು ಶಬ್ಬೀರ್ ಹಣ್ಣು ವ್ಯಾಪಾರದ ನೆಪದಲ್ಲಿ ಶಿವಮೊಗ್ಗದ ಹಲವೆಡೆ ಸಂಪರ್ಕ ಹೊಂದಿದ್ದ. ಬಂಧಿತ ಶಬ್ಬೀರ್ ಮೊಬೈಲ್ನಲ್ಲಿರುವ ಡಾಟಾವನ್ನು ಗಮನಿಸಿದ ಶಿವಮೊಗ್ಗ ಪೊಲೀಸರು ನಿನ್ನೆ ತಡರಾತ್ರಿ ಹಣ್ಣಿನ ಅಂಗಡಿಯಲ್ಲಿಯೇ ಈತನನ್ನು ಬಂಧಿಸಿದ್ದಾರೆ. ಈ ಘಟನೆ ಬಳಿಕ ಗಂಗಾವತಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಓರ್ವ ಹಣ್ಣಿನ ವ್ಯಾಪಾರಿ ಐಎಸ್ ಸಂಘಟನೆಯ ಜೊತೆಯಲ್ಲಿ ನಂಟು ಹೊಂದಿದ್ದನಾ ಎಂಬ ವಿಚಾರವನ್ನು ಕೇಳಿ ಗಂಗಾವತಿ ಜನತೆ ಬೆಚ್ಚಿ ಬಿದ್ದಿದ್ದಾರೆ . ಗಂಗಾವತಿ ನಿಷೇಧಿತ ಉಗ್ರರ ತಾಣವಾಗಿ ಬದಲಾಗುತ್ತಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಗಂಗಾವತಿಯಲ್ಲಿ ಇನ್ನೂ ಕೆಲವು ಜನ ಶಂಕಿತ ಉಗ್ರರು ಇರುವ ಅನುಮಾನ ಇದೆ ಎಂದು ಹೇಳಿದ್ದು ಗಂಗಾವತಿ ಭಾಗದ ಜನತೆಯ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಗಂಗಾವತಿಯ ಜನತೆ ಈ ವಿಚಾರದಿಂದ ಭಯಭೀತರಾಗಿದ್ದಾರೆ. ಪೊಲೀಸರು ಹಾಗೂ ಉನ್ನತ ತನಿಖಾ ತಂಡ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಜಿಲ್ಲೆಯಲ್ಲಿ ಶಾಂತಿಯನ್ನು ಕದಡಬೇಕು ಎಂಬ ದುರುದ್ದೇಶವನ್ನು ಇಟ್ಟುಕೊಂಡ ಕೆಲವು ದುಷ್ಕರ್ಮಿಗಳು ಈ ಉಗ್ರ ಚಟುವಟಿಕೆ ನಡೆಸಲು ಮುಂದಾಗಿದ್ದರು ಎಂಬ ಅನುಮಾನವಿದೆ. ಪೊಲೀಸ್ ಇಲಾಖೆಯು ಈ ಬಗ್ಗೆ ವಿಶೇಷ ಕಾರ್ಯಾಚರಣೆಯನ್ನು ನಡೆಸಬೇಕು. ಎನ್ಐಎ ಸೇರಿದಂತೆ ಉನ್ನತ ತನಿಖಾ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಪರಣ್ಣ ಮನವಳ್ಳಿ ಆಗ್ರಹಿಸಿದ್ದಾರೆ.
ಇನ್ನು ಗಂಗಾವತಿಯಲ್ಲಿ ವಶಕ್ಕೆ ಪಡೆದಿರುವ ಶಬ್ಬೀರ್ನನ್ನು ಪೊಲೀಸರು ಇಂದು ಶಿವಮೊಗ್ಗಕ್ಕೆ ಕರೆತರುವ ಸಾಧ್ಯತೆಯಿದೆ. ಈಗಾಗಲೇ ಬಂಧಿತರಾಗಿರುವ ಮಾಜ್ ಹಾಗೂ ಯಾಸಿನ್ ಜೊತೆಯಲ್ಲಿ ಶಬ್ಬೀರ್ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಶಬ್ಬೀರ್ ಉಗ್ರ ಸಂಘಟನೆಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಶಿವನೊಗ್ಗ ಗ್ರಾಮಾಂತರ ಠಾಣೆಗೆ ಹೆಚ್ಚಿನ ವಿಚಾರಣೆಗೆ ಈತನನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ.
ಇದನ್ನು ಓದಿ : 5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ
ಇದನ್ನೂ ಓದಿ : medical students :ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ
Suspected links with the banned terrorist organization ISIS: Fruit trader arrested