ಒಡಿಶಾ : ದಂಪತಿಗಳು ವಾಮಾಚಾರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳು ಕಡಿದು ಹತ್ಯೆ (Couple hacked to death) ಮಾಡಿದ ಘಟನೆ ನಡೆದಿದೆ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತಿಳಿಸಿದ್ದಾರೆ.
ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ಬಹದಾ ಮುರ್ಮು ಮತ್ತು ಅವರ ಪತ್ನಿ ಧನಿ 35ವರ್ಷ ಅವರನ್ನು ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಅಪರಿಚಿತ ವ್ಯಕ್ತಿಗಳು ಕಡಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ಅವರ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತೋರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಕಿಯೋಂಜಾರ್ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮಹಾಪಾತ್ರ ತಿಳಿಸಿದರು. ಶನಿವಾರ ರಾತ್ರಿ ಮೃತ ಪಟ್ಟ ದಂಪತಿಗಳಾದ ಬಹದಾ ಮುರ್ಮು ಮತ್ತು ಅವರ ಪತ್ನಿ ಧನಿ ಹೊರಗೆ ಮಲಗಿದ್ದರು ಎಂದು ದಂಪತಿಯ ಪುತ್ರಿ ಸಿಂಗೋ ಹೇಳಿದ್ದಾರೆ.
ಇದನ್ನೂ ಓದಿ : Harassment: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ ಸೈಕೋ ಪತಿ; ಅತ್ತೆ-ಮಾವ ಕೂಡಾ ಸಾಥ್..!
ಇದನ್ನೂ ಓದಿ : Mumbai bus accident: ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಬಸ್ ಪಲ್ಟಿ: ಇಬ್ಬರು ವಿದ್ಯಾರ್ಥಿಗಳು ಸಾವು
ಇದನ್ನೂ ಓದಿ : Student rape: ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಂದ ಹೀನಾಯ ಕೃತ್ಯ; ಅಮಲು ಪದಾರ್ಥ ನೀಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ
“ನಾನು ಕೋಣೆಯೊಳಗೆ ಮಲಗಿದ್ದೆ. ಕಿರುಚಾಟ ಕೇಳಿ ಹೊರಬಂದ ನಂತರ ನನ್ನ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದೆ” ಎಂದು ಸಿಂಗೋ ಹೇಳಿದರು. ಅವಳು ತನ್ನ ಚಿಕ್ಕಪ್ಪ ಕಿಸಾನ್ ಮರಾಂಡಿಗೆ ಕರೆ ಮಾಡಿ ನಡೆದ ಘಟನೆಯನ್ನು ತಿಳಿಸಿದಳು.”ಸಿಂಗೋದಿಂದ 12.30 ರ ಸುಮಾರಿಗೆ ನನಗೆ ಕರೆ ಬಂದಿತು. ನಾನು ಮತ್ತು ನನ್ನ ಹಿರಿಯ ಮಗನ ಜೊತೆಗೆ ಮೋಟಾರ್ ಸೈಕಲ್‌ನಲ್ಲಿ ಗ್ರಾಮವನ್ನು ತಲುಪಿದೆವು” ಎಂದು ಮರಾಂಡಿ ಹೇಳಿದರು. ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Suspected of witchcraft: Couple hacked to death