ಬೆಂಗಳೂರು : terrorist arrested : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಉಗ್ರ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಿಲಕ್ ನಗರದಲ್ಲಿ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತನನ್ನು ಅಸ್ಸಾಂ ಮೂಲದ ಅಖ್ತರ್ ಹುಸೇನ್ ಎಂದು ಗುರುತಿಸಲಾಗಿದೆ. ಜೊಮ್ಯಾಟೋ , ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದೊಂದು ವರ್ಷದಿಂದ ಉಗ್ರವಾದದ ಬಗ್ಗೆ ಒಲವನ್ನು ಹೊಂದಿದ್ದ ಎನ್ನಲಾಗಿದೆ.
ಟೆಲಿಗ್ರಾಂ ಹಾಗೂ ಫೇಸ್ಬುಕ್ ಸಹಾಯದಿಂದ ಉಗ್ರರ ಸಂಪರ್ಕವನ್ನು ಬೆಳೆಸಿದ್ದ ಈತ ಕಳೆದೊಂದು ವರ್ಷದಿಂದ ಅಲ್ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದ ಎನ್ನಲಾಗಿದೆ. ತಿಲಕ್ ನಗರದಲ್ಲಿ ಕೆಲವು ಯುವಕರ ಜೊತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈತನ ಬಗ್ಗೆ ಖಚಿತ ಮಾಹಿತಿ ಆಧರಿಸಿದ 30ಕ್ಕೂಅ ಅಧಿಕ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಖ್ತರ್ ಹುಸೇನ್ನನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ಅಖ್ತರ್ನನ್ನು ಹೇಗಾದರೂ ಮಾಡಿ ಹೆಡೆಮುರಿ ಕಟ್ಟಬೇಕು ಎಂದುಕೊಂಡಿದ್ದ ಕಳೆದ 15 ದಿನಗಳಿಂದ ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಹೇಗಾದರೂ ಮಾಡಿ ತಾನು ಅಲ್ಕೈದಾ ಎಂಬ ಉಗ್ರ ಸಂಘಟನೆಯನ್ನು ಸೇರಿಕೊಳ್ಳಬೇಕು ಎಂದುಕೊಂಡಿದ್ದ ಈತ ಸೋಶಿಯಲ್ ಮೀಡಿಯಾದಲ್ಲಿ ಉಗ್ರರ ಜೊತೆ ಸ್ನೇಹ ಸಂಪಾದಿಸಲು ಯತ್ನಿಸುತ್ತಿದ್ದುದನ್ನು ಕಳೆದ 15 ದಿನಗಳಿಂದ ಪೊಲೀಸರು ಟ್ರ್ಯಾಕ್ ಮಾಡುತ್ತಲೇ ಇದ್ದರು. ಇನ್ನೇನು 20 ದಿನಗಳಲ್ಲಿ ಕಾಶ್ಮೀರ ಅಲ್ಖೈದಾ ಉಗ್ರ ಸಂಘಟನೆ ಸೇರಬೇಕು ಎಂದಿಕೊಂಡಿದ್ದವನನ್ನು ಜೈಲಿಗಟ್ಟುವಲ್ಲಿ ರಾಜಧಾನಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜಧಾನಿಯಲ್ಲಿ ಉಗ್ರನ ಬಂಧನದ ಕುರಿತು ಮಾತನಾಡಿದ ಸಿಎಂ ಬಸರವಾಜ ಬೊಮ್ಮಾಯಿ, ಜಮ್ಮು – ಕಾಶ್ಮೀರದ ಪೊಲೀಸರು ಇಂತಹ ಉಗ್ರರ ಮೇಲೆ ಕಣ್ಣಿಟ್ಟಿದ್ದಾರೆ. ಕಾಶ್ಮೀರ ಪೊಲೀಸರಿಗೆ ಸಹಕಾರವನ್ನು ನೀಡುತ್ತಿರುವ ರಾಜ್ಯದ ಪೊಲೀಸರು ಈ ರೀತಿಯ ಉಗ್ರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಹಿಂದೆ ಶಿರಸಿ ಹಾಗೂ ಭಟ್ಕಳದ ಕಡೆಗಳಲ್ಲಿಯೂ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನು ಓದಿ : BPL card holders : ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್ : ಚಕ್ರದ ವಾಹನ ಹೊಂದಿದ್ರೆ ಭಾರೀ ದಂಡ
suspected terrorist arrested in bengaluru here terrorist pin to pin detail