ತಮಿಳುನಾಡು : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲಿನಲ್ಲಿ (Tamil Nadu News) ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಒಂಬತ್ತು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಮಧುರೈ ರೈಲು ನಿಲ್ದಾಣದ ಬಳಿಯ ಬೋಡಿ ಲೇನ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂಬತ್ತು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಮೃತದೇಹಗಳನ್ನು ತಮಿಳುನಾಡಿನ ಮಧುರೈನ ಸರಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಪ್ರಯಾಣಿಕರೊಬ್ಬರು ಕಾಫಿ ಮಾಡಲು ಗ್ಯಾಸ್ ಸ್ಟೌವ್ ಹೊತ್ತಿಸಿದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಮುಂಜಾನೆ 5:30 ರ ಸುಮಾರಿಗೆ ಮಧುರೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿ ಉತ್ತರ ಪ್ರದೇಶದಿಂದ ಬಂದ ಯಾತ್ರಾರ್ಥಿಗಳು ಇದ್ದರು. ಕಾಫಿ ಮಾಡಲು ಗ್ಯಾಸ್ ಸ್ಟವ್ ಹೊತ್ತಿಸಿದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸದ್ಯಕ್ಕೆ ನಾವು ಒಂಬತ್ತು ಮೃತದೇಹಗಳನ್ನು ಹೊರತೆಗೆದಿದ್ದೇವೆ ಎಂದು ಮಧುರೈ ಜಿಲ್ಲಾಧಿಕಾರಿ ಎಂಎಸ್ ಸಂಗೀತಾ ಹೇಳಿದ್ದಾರೆ.
ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದ ವೇಳೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಇದನ್ನೂ ಓದಿ : Online Loan App Fraud : ಆನ್‌ಲೈನ್ ಆ್ಯಪ್ ಸಾಲ ಪಡೆಯುವ ಮುನ್ನ ಹುಷಾರ್ : ಮಂಗಳೂರಿನ ಮಹಿಳೆಗೆ ನಗ್ನ ಫೋಟೋ ಹರಿಬಿಡುವ ಬೆದರಿಕೆ
ತೆಲಂಗಾಣ : ಗರ್ಭಿಣಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದಾಗ ರಸ್ತೆಯಲ್ಲೇ ಮಗುವಿಗೆ ಜನ್ಮ (Telangana News) ನೀಡಿದ್ದಾರೆ. ಮಹಿಳೆಯ ಕುಟುಂಬಸ್ಥರು ಫೋನ್ ಮಾಡಿದರೂ ಆಂಬ್ಯುಲೆನ್ಸ್ ಬಾರದ ಕಾರಣ ಸಕಾಲದಲ್ಲಿ ವಾಹನದಲ್ಲಿ ಇಂಧನವಿಲ್ಲದೇ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಲಾಗಿದೆ.
ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ದೂರದಲ್ಲಿರುವ ಪೆಂಬಿ ಮಂಡಲದ ತುಳಸಿಪೇಟೆ ಗ್ರಾಮದ ಗಂಗಾಮಣಿ ಎಂಬುವರಿಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ, ಮಹಿಳೆಯ ಕುಟುಂಬಸ್ಥರು ಹೊಳೆ ದಾಟಲು ಮತ್ತು ಹತ್ತಿರದ ರಸ್ತೆಯನ್ನು ತಲುಪಲು ಮಹಿಳೆಯನ್ನು ತಮ್ಮ ಕೈಗಳಲ್ಲಿ ಹೊತ್ತುಕೊಂಡರು.
ಮಂಡಲ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಗೆ ತಲುಪಲು 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದಾಗ ವಾಹನದಲ್ಲಿ ಇಂಧನ ಖಾಲಿಯಾಗುತ್ತಿದೆ ಎಂದು ತಿಳಿಸಲಾಯಿತು. ಮಹಿಳೆ ನಾಲ್ಕು ಗಂಟೆಗಳ ಕಾಲ ಯಾತನೆ ಅನುಭವಿಸಿ ಕುಟುಂಬ ಸದಸ್ಯರ ಸಹಾಯದಿಂದ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಹೆರಿಗೆಯ ನಂತರವೇ ಆಂಬ್ಯುಲೆನ್ಸ್ ಬಂದಿತು. ಮಹಿಳೆ ಮತ್ತು ಗಂಡು ಮಗು ಸುರಕ್ಷಿತವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇಂತಹ ಘಟನೆಗಳು ನಡೆಯದಂತೆ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Tamil Nadu News : Fire accident in train : 9 dead, 20 injured