ಅಸ್ಸಾಂ : ಮುಂಜಾವಿನ ನುಸುಕಿನ ವೇಳೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ (Terrible Car Accident Case) ಒಂದೇ ಕಾಲೇಜಿನ ಏಳು ವಿದ್ಯಾರ್ಥಿಗಳು ಮೃತ್ಯುಲೋಕಕ್ಕೆ ತೆರಳಿದ್ದಾರೆ. ಈ ಅವಘಡದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಮೃತ ಪಟ್ಟ ದುರ್ದೈವಿಗಳಾದ ಕೌಶಿಕ್ ಬರುವಾ, ಕೌಶಿಕ್ ಮೋಹನ್, ರಾಜ್ ಕಿರಣ್ ಭೂಯಾನ್, ಇವೋನ್ ಬರುವಾ, ಅರಿಂದಮ್ ಭೋವಲ್, ಉಪಾಂಶು ಶರ್ಮಾ, ನಿಯಾರ್ ದೇಕಾ ಎಂದು ಗುರುತಿಸಲಾಗಿದೆ. ಅಸ್ಸಾಂ ಗುವಾಹಟಿಯ ಜಾಲುಕ್‌ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ ಹತ್ತು ವಿದ್ಯಾರ್ಥಿಗಳು ಮುಂಜಾನೆಯ ನುಸುಕಿನ ವೇಳೆಗೆ ಕಾರಿನಲ್ಲಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದು. ಇದೇ ವೇಳೆ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮತ್ತೊಂದು ರಸ್ತೆ ಬದಿಯಲ್ಲಿ ವೇಗವಾಗಿ ಬರುತ್ತಿದ್ದ ಬೊಲೆರೊ ಕಾರಿಗೆ ಢಿಕ್ಕಿ ಹೊಡೆದಿದೆ. ಬೊಲೆರೊ ಗಾಡಿ ಕಾರಿಗೆ ಢಿಕ್ಕಿ ಹೊಡೆದ ಪರಿಣಮಾವಾಗಿ ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿದ್ದು, ಸ್ಥಳದಲ್ಲೇ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : Bangalore underpass case : ಬೆಂಗಳೂರು ಅಂಡರ್ ಪಾಸ್‌ನಲ್ಲಿ ಯುವತಿ ಸಾವು : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ
ಇದನ್ನೂ ಓದಿ : Manipal Arbi Falls : ಅರ್ಬಿ ಫಾಲ್ಸ್‌ನಲ್ಲಿ ಪೊಲೀಸರ ಹೆಸರಲ್ಲಿ ಪ್ರೇಮಿಗಳಿಂದ ಸುಲಿಗೆ : ಇಬ್ಬರ ಬಂಧನ
ಮತ್ತುಳಿದ ಮೂವರು ವಿದ್ಯಾರ್ಥಿಗಳು ಹಾಗೂ ಬೊಲೆರೊದ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಗುವಾಹಟಿ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮಾ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
Terrible Car Accident Case: 7 engineering students of the same college die in a terrible car accident: 3 seriously injured