ಮಂಗಳವಾರ, ಏಪ್ರಿಲ್ 29, 2025
HomeCrimeThawar Chand Gehlot: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

Thawar Chand Gehlot: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

- Advertisement -

ಬೆಂಗಳೂರು: (Thawar Chand Gehlot) ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಕಾರು ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ರವಿಕುಮಾರ್‌ ಎಸ್.‌ ಕಾಳೆ ಮೃತಪಟ್ಟ ಕಾರು ಚಾಲಕ.

ರಾಜ್ಯಪಾಲರಾದ ಗೆಹ್ಲೋಟ್‌ (Thawar Chand Gehlot) ಅವರನ್ನು ಕರೆದೊಯ್ಯಲು ಚಾಲಕ ರವಿಕುಮಾರ್‌ ಮಧ್ಯ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ರಾಜ್ಯಪಾಲರನ್ನು ಕಾರಿನಲ್ಲಿ ಕರೆದೊಯ್ಯಲು ಸಿದ್ದತೆ ಮಾಡುತ್ತಿರುವ ವೇಳೆ ಚಾಲಕ ರವಿಕುಮಾರ್‌ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಮಧ್ಯೆ ಹೃದಯಾಘಾತವೂ ಸಂಭವಿಸಿದೆ. ಕೂಡಲೆ ಅವರಿಗೆ ಲಾಂಚ್‌ ಬಳಿ ಪ್ರಥಮ ಚಿಕಿತ್ಸೆ ನೀಡಿ ತಕ್ಷಣವೇ ಆಂಬುಲೆನ್ಸ್‌ ನಲ್ಲಿ ಆಸ್ಟರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರವಿಕುಮಾರ್‌ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಹೃದಯಾಘಾತವಾದ ಸಂದರ್ಭ ಲಾಂಚ್‌ ಬಳಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಟರ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯಪಾಲರಾದ ಗೆಹ್ಲೋಟ್‌ ಅವರು ರಾಜಭವನಕ್ಕೆ ತೆರಳಬೇಕಿತ್ತು. ಇದಕ್ಕಾಗಿ ಶನಿವಾರ ರಾತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರ ಬರುವಿಕೆಗಾಗಿ ರವಿಕುಮಾರ್‌ ಕಾಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : small child died: ನೀರಿನ ಬಕೆಟ್‌ ಗೆ ಬಿದ್ದು ಪ್ರಾಣ ಕಳೆದುಕೊಂಡ ಮುದ್ದು ಕಂದಮ್ಮ..!

ಇದನ್ನೂ ಓದಿ : Terrible accident: ಕಾರು ಲಾರಿ ಭೀಕರ ಅಪಘಾತ :3 ಸಾವು, ಓರ್ವ ಗಂಭೀರ

ಇದನ್ನೂ ಓದಿ : Attack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ ಅರೆಸ್ಟ್

ಇದನ್ನೂ ಓದಿ : ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ : ಊಟಕ್ಕೆ ಬಂದ ಜೋಡಿಯನ್ನು ತಡೆದ ಭಜರಂಗದಳ ಕಾರ್ಯಕರ್ತರು

The incident in which the car driver of Karnataka Governor Thawar Chand Gehlot died due to heart attack took place at Kempegowda International Airport on Saturday midnight. Ravikumar S. Kale was the driver of the deceased car.

RELATED ARTICLES

Most Popular