ಬೆಳಗಾವಿ: (The selfie craze) ಸೆಲ್ಫಿ ತೆಗೆದುಕೊಳ್ಳುವ ವೇಳೆ ಜಾರಿಬಿದ್ದು ನಾಲ್ವರು ಯುವತಿಯರು ಸಾವನ್ನಪ್ಪಿರುವ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಬೆಳಗಾವಿಯ ಕಿತವಾಡ ಫಾಲ್ಸ್ ನಲ್ಲಿ ನಡೆದಿದೆ. ನಾಲ್ವರು ಯುವತಿಯರು ಸಾವನ್ನಪ್ಪಿದ್ದು, ಇನ್ನೋರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.
ಹೋದಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಯುವಕ ಯುವತಿಯರಿಗೆ ಒಂದು ಕ್ರೇಜ್ (The selfie craze) ಇದ್ದಂತೆ. ಸೆಲ್ಫಿ ಹುಚ್ಚಿಗೆ ಎಷ್ಟೋ ಮಂದಿ ಬಲಿಯಾಗಿದ್ದರು ಕೂಡ ಕೆಲವರಲ್ಲಿ ಇನ್ನೂ ಸೆಲ್ಫಿ ಹುಚ್ಚು ಬಿಟ್ಟಿಲ್ಲ. ಅದೇ ರೀತಿ ಸೆಲ್ಫಿ ಹುಚ್ಚಿಗೆ ನಾಲ್ವರು ಯುವತಿಯರು ಬಲಿಯಾಗಿರುವ ಘಟನೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿನ ಬೆಳಗಾವಿಯಲ್ಲಿ ನಡೆದಿದೆ. ಆಸೀಯಾ ಮುಜಾವರ್(17 ವರ್ಷ), ಕುದ್‌ಶೀಯಾ(20 ವರ್ಷ), ರುಕ್ಕಶಾರ್ ಭಿಸ್ತಿ(20 ವರ್ಷ), ತಸ್ಮಿಯಾ(20 ವರ್ಷ) ಎನ್ನುವವರು ಸೆಲ್ಫಿ ಕ್ರೇಜ್ ಗೆ ಬಲಿಯಾದ ನಾಲ್ವರು ಯುವತಿಯರು.
ಬೆಳಗಾವಿಯಿಂದ ಟ್ರಿಪ್‌ಗೆಂದು ಕಿತವಾಡಿ ಫಾಲ್ಸ್ ಗೆ ನಲವತ್ತು ಮಂದಿ ಯುವತಿಯರು ತೆರಳಿದ್ದರು. ಕಿತವಾಡ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಯುವತಿಯರು ಮೃತಪಟ್ಟಿದ್ದಾರೆ. ಇನನೋರ್ವ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಫಾಲ್ಸ್ ಬಳಿಯಲ್ಲಿ ಮೃತಪಟ್ಟ ಯುವತಿಯರ ಮೃತದೇಹವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ಅವರ ಕುಟುಂಬದವರಿಗೆ ನೀಡಲಾಗಿದೆ.
ಇದನ್ನೂ ಓದಿ : Bomb blast case: ಮಂಗಳೂರು ಬಾಂಬ್ ಸ್ಫೋಟ ಪ್ರಕರಣ: ತನಿಖೆಯನ್ನು ಎನ್‌ಐಎ ಗೆ ವರ್ಗಾಯಿಸಲು ರಾಜ್ಯ ಸರ್ಕಾರದ ನಿರ್ಧಾರ
ಇದನ್ನೂ ಓದಿ : Brazil School Shooting : ಹಳೆ ವಿದ್ಯಾರ್ಥಿಯಿಂದ ಶಾಲೆಯಲ್ಲಿ ಗುಂಡಿನ ದಾಳಿ : 3 ಬಲಿ, 13 ಮಂದಿ ಗಾಯ
ಯುವತಿಯರು ಕಾಲು ಜಾರಿ ಬಿದ್ದ ವೇಳೆಯಲ್ಲಿ ರಕ್ಷಣೆ ಮಾಡುವವರು ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಈಜುಗಾರರ ನೆರವಿನಿಂದ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಬಳಿ ಯುವತಿಯರ ಪೋಷಕರು ಜಮಾಯಿಸಿದ್ದು, ಅಕ್ರಂದನ ಮುಗಿಲುಮುಟ್ಟಿದೆ.
(The selfie craze) The incident in which four young women died while taking a selfie took place at Kitawada Falls in Belgaum on the Karnataka-Maharashtra border. Four young women have died and the condition of another young woman is critical.