ಸೋಮವಾರ, ಏಪ್ರಿಲ್ 28, 2025
HomeCrimeThreaten letter to PM: ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ...

Threaten letter to PM: ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿ

- Advertisement -

ನವದೆಹಲಿ: Threaten letter to PM: ಪ್ರಧಾನಿ ಮೋದಿ ಅವರಿಗೆ ಇ-ಮೇಲ್ ಮುಖಾಂತರ ಜೀವಬೆದರಿಕೆ ಒಡ್ಡಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಈತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧನಕ್ಕೊಳಗಾದ ವ್ಯಕ್ತಿಯನ್ನು 25 ವರ್ಷದ ಅಮನ್ ಸಕ್ಸೇನಾ ಎಂದು ಗುರುತಿಸಲಾಗಿದೆ. ಅಲ್ಲದೇ ಈತ ಉತ್ತರ ಪ್ರದೇಶದ ಬದೌನ್ ಮೂಲದವನು ಎಂದು ತಿಳಿದುಬಂದಿದೆ. ಮಾಹಿತಿ ಪ್ರಕಾರ, ಈತ ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆ ಒಡ್ಡಿ ಇ-ಮೇಲ್ ಮಾಡಿದ್ದ. ಈ ಹಿನ್ನೆಲೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿರುವ ತಂದೆಯ ಮನೆಯಲ್ಲಿದ್ದ ಆತನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಪ್ರಧಾನಿ ಮೋದಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಗುಜರಾತ್ ನ ಜಾಮ್ ನಗರದಲ್ಲಿ ನ.27ರಂದು ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಅವರ ಪ್ರಾಣ ತೆಗೆಯುವುದಾಗಿ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: Delhi Murder case: ಪತಿಯ ಕೊಲೆಗೈದು 22 ತುಂಡುಗಳಾಗಿ ಕತ್ತರಿಸಿದ ಪತ್ನಿ, ಮಗ : ಶ್ರದ್ಧಾ ಮಾದರಿಯಲ್ಲೇ ಮತ್ತೊಂದು ಹತ್ಯೆ

ಅಂದಹಾಗೆ ಅಮನ್ ಸಕ್ಸೇನಾ ಬಾಂಬೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾನೆ. ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಈತ ಈ-ಮೇಲ್ ಕಳುಹಿಸಿದ್ದ, ಅದನ್ನು ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರಲಾಗಿತ್ತು. ಕೇಂದ್ರ ಗೃಹ ಇಲಾಖೆ ಪ್ರಕರಣದ ತನಿಖೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವಹಿಸಿತ್ತು. ಎಟಿಎಸ್ ಅಧಿಕಾರಿಗಳು ತನಿಖೆ ಆರಂಭಿಸಿ, ಇ-ಮೇಲ್ ಕಳಿಸಿದವನನ್ನು ಟ್ರೇಸ್ ಮಾಡಿದ್ದಾರೆ. ಈತ ಉತ್ತರ ಪ್ರದೇಶದ ಬದೌನ್ ನ ಆದರ್ಶ ನಗರದ ನಿವಾಸಿಯಾಗಿದ್ದು, ಆತನ ಮನೆಗೆ ತೆರಳಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಗುಜರಾತ್ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Terrorist Fake ID: ದಾಖಲೆ ಕಳೆದುಕೊಂಡಿದ್ರೆ ಹುಷಾರ್ ! ನಿಮ್ಮ ಹೆಸರಲ್ಲಿ ಸಿದ್ದವಾಗುತ್ತೆ ಉಗ್ರರ ನಕಲಿ ಐಡಿ

ಬೆದರಿಕೆ ಪತ್ರದ ಹಿಂದಿದ್ಯಾ ಪ್ರೇಮ ಪುರಾಣ:
ಮೂಲಗಳ ಪ್ರಕಾರ, ಅಮನ್ ಸಕ್ಸೇನಾ ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆಗೆ ಆಪ್ತನಾಗಿದ್ದ ವ್ಯಕ್ತಿಯನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸುವ ಸಲುವಾಗಿ ಈ ತಂತ್ರ ಹೂಡಿದ್ದನಂತೆ. ತಾನು ಪ್ರೀತಿಸಿದ್ದ ಹುಡುಗಿ ಜೊತೆ ಇನ್ನೊಬ್ಬ ಆತ್ಮೀಯನಾಗಿರುವುದನ್ನು ಸಹಿಸದೇ ಆತನನ್ನು ಪೊಲೀಸರಿಗೆ ಹಿಡಿದುಕೊಡಬೇಕೆಂದ ಉದ್ದೇಶದಿಂದ ಈ ಉಪಾಯ ಮಾಡಿದ್ದನಂತೆ. ಹೀಗಾಗಿ ಆತನ ಮೇಲೆ ಅನುಮಾನ ಮೂಡುವಂತೆ ಪ್ರಧಾನಿಗೆ ಕಳಿಸಿದ್ದ ಬೆದರಿಕೆ ಪತ್ರದಲ್ಲಿ ಒಕ್ಕಣೆ ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Threaten letter to PM: Gujarat ATS nabs IIT graduate for threat mail to PM Narendra Modi

RELATED ARTICLES

Most Popular